ಕರಾವಳಿ

ಮಣಿಪಾಲ ಆಸ್ಪತ್ರೆಯಲ್ಲಿ ಯುವ ಪತ್ರಕರ್ತೆ ಸಾವು; ವೈದ್ಯರ ನಿರ್ಲಕ್ಷ್ಯದ ಆರೋಪ

Pinterest LinkedIn Tumblr

ಉಡುಪಿ: ಮಣಿಪಾಲ ಆಸ್ಪತ್ರೆ ವೈದರ ಎಡವಟ್ಟಿನಿಂದ ಯುವ ಪತ್ರಕರ್ತೆ ಸಾವನ್ನಪ್ಪಿದ ಬಗ್ಗೆ ಆಕೆ ಕುಟುಂಬಿಕರು ಆರೋಪಿಸುತ್ತಿದ್ದು ಈ ಘಟನೆ ಬುಧವಾರ ನಡೆದಿದೆ. ಸಾಸ್ತಾನ ಬಳಿಯ ಗುಂಡ್ಮಿಯ ಅರ್ಚನಾ ಗುಂಡ್ಮಿ ಮೃತಪಟ್ಟ ಯುವ ಪತ್ರಕರ್ತೆಯಾಗಿದ್ದಾರೆ.

ಅತಿಯಾದ ಜ್ವರದಿಂದ ಬಳಲುತ್ತಿದ್ದ ಅರ್ಚನಾ 18 ದಿನಗಳ ಹಿಂದೆ ಮಣಿಪಾಲ‌ ಆಸ್ಪತ್ರೆ ಗೆ ದಾಖಲಾಗಿದ್ದರು. ಹೆಚ್1 ಎನ್1 ಎನ್ನುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರೂ ಕೂಡ ಆರಂಭದಲ್ಲಿ ರಿಪೋರ್ಟ್ ತೆಗೆದ ಮಣಿಪಾಲದ ವೈದ್ಯರು ಸಾಮಾನ್ಯ ಚಿಕಿತ್ಸೆ ನೀಡಿದ್ದು ಹೆಚ್1 ಎನ್1 ಇಲ್ಲ ಅಂತಾ ಕುಟುಂಬಸ್ಥರ ಬಳಿ ತಿಳಿಸಿದ್ದರು. ನಂತರ ಪುಣೆಯಿಂದ ಬಂದ ವರದಿಯಲ್ಲಿ ಹೆಚ್1 ಎನ್1 ಇರುವುದರ ಬಗ್ಗೆ ಪತ್ತೆಯಾಗಿ ಚಿಕಿತ್ಸೆ ಪಡೆಯುತ್ತಿದ್ದರು‌. ನಡೆದಾಡುಕೊಂಡು ಅರೋಗ್ಯವಂತಾರಾಗಿಯೇ ಬಂದಿದ್ದ ಅರ್ಚನಾ ಚೆನ್ನಾಗಿಯೇ ಚಿಕಿತ್ಸೆ ನಡೆಯುತ್ತಿತ್ತು .ಅರ್ಚನಾ ಚೇತರಿಸಿಕೊಂಡಿದ್ದರು.ಸುಮಾರು 2 ಲಕ್ಷದವರೆಗೆ ಆಸ್ಪತ್ರೆ ಚಿಕಿತ್ಸೆಯನ್ನು ಕುಟುಂಬಸ್ಥರು ಭರಿಸಿದ್ದರು.

ನಂತರ ಅಯೂಷ್ಮಾನ್ ಭಾರತ್ ಕಾರ್ಡ್ ಇರೋಂದ್ರಿಂದ ಅದರ ಮೂಲಕ ಚಿಕಿತ್ಸೆ ಮುಂದುವರೆಸಲು ಮುಂದಾದ ಕಾರಣ ಆಸ್ಪತ್ರೆ ಅಡಳಿತ ಮಂಡಳಿ ಚಿಕಿತ್ಸೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು ಅನ್ನೋದು ಕುಟುಂಬಸ್ಥರ ಆರೋಪವಾಗಿದೆ. ಅರ್ಚನಾ ಆರೋಗ್ಯ ಹದಗೆಡುತ್ತಾ ಗಂಭೀರ ಸ್ಥಿತಿ ಪಡೆಯುತ್ತಿದ್ದಂತೆ ಕುಟುಂಬಸ್ಥರಿಗೆ ಸಂಶಯ ಬಂದು ಕೇಳಿದಾಗ ಬದುಕುಳಿಯುವ ಸಾಧ್ಯತೆ ಕಮ್ಮಿ ಅನ್ನೊದನ್ನ ಉಡಾಫೆಯಾಗಿ ವೈದ್ಯರು ಹೇಳಿದ್ದಾರೆ ಅನ್ನೋದು ಕುಟುಂಬಸ್ಥರ ಆರೋಪವಾಗಿದೆ.

ಅರ್ಚನಾ ಇತ್ತೀಚೆಗಷ್ಟೇ ಮದುವೆಯಾಗಿ ಗರ್ಭೀಣಿಯಾಗಿದ್ದರು. ಇದೀಗ ಹೊಟ್ಟೆಯಲ್ಲಿದ್ದ ಮಗು ಸಹಿತ ಪ್ರಾಣ ಕಳೆದುಕೊಂಡಿರುವುದರಿಂದ ಅರ್ಚನಾ ಕುಟುಂಬ ಕಣ್ಣೀರಲ್ಲಿ ಮುಳುಗಿದೆ. ಅರ್ಚನಾ ಪತ್ರಕರ್ತೆಯಾಗಿ ಉಡುಪಿಯ ಖಾಸಗಿ ವಾಹಿನಿಗಳಲ್ಲಿ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡಿದ್ದರು.

ಈ ಸಾವಿನ ಬಗ್ಗೆ ಆಸ್ಪತ್ರೆ ಮಾತ್ರ ಯಾವುದೇ ಸ್ಪಷ್ಟನೆ ನೀಡಿಲ್ಲ.

Comments are closed.