ಕರಾವಳಿ

ಲಾಲ್‌ಭಾಗ್‌ನಲ್ಲಿ ಅವೈಜ್ಞಾನಿಕ ಚರಂಡಿಯ ನಿರ್ಮಾಣ ಕಾಮಗಾರಿ : ಶಾಸಕ ಕಾಮಾತ್‌ರಿಂದ ಪರಿಶೀಲನೆ

Pinterest LinkedIn Tumblr

ಮಂಗಳೂರು : ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಎದುರಿನಲ್ಲಿರುವ ಗಾಂಧಿವೃತ್ತದ ಪಾಶ್ವಭಾಗದಲ್ಲಿರುವ ಮಹಿಳಾ ಹಾಸ್ಟೆಲ್ ಎದುರಿಗೆ ಮಳೆಯ ನೀರು ಹೋಗುವ ಚರಂಡಿಯ ನಿರ್ಮಾಣ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಇದರಿಂದ ಮಂಗಳೂರಿನ ಪ್ರಮುಖ ರಸ್ತೆ ಮತ್ತು ಜಂಕ್ಷನ್ ಅಗಲಕಿರಿದಾಗುತ್ತಿದ್ದು ಆ ಮೂಲಕ ವಾಹನಗಳ ಸರಾಗ ಸಂಚಾರಕ್ಕೆ ತೊಂದರೆಯಾಗಲಿದೆ.

ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಅಧಿಕಾರಿಗಳನ್ನು ಕರೆಸಿ ಈ ಭಾಗದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆ ಆಗಬಾರದು ಎನ್ನುವ ದೃಷ್ಟಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಲಹೆ ಸೂಚನೆ ನೀಡಿದರು.

ಪಾಲಿಕೆಯ ಮಾಜಿ ಸದಸ್ಯ ದಿವಾಕರ ಪಾಂಡೇಶ್ವರ್, ಬಿಜೆಪಿ ಮುಖಂಡ ವಸಂತ ಜೆ ಪೂಜಾರಿ ಮತ್ತಿತ್ತರರು ಶಾಸಕರ ಜೊತೆಗಿದ್ದರು.

Comments are closed.