ಕರಾವಳಿ

ವಿಶ್ವಕರ್ಮ ಬಂಧುಗಳು ಭವಂತಿಸ್ಟ್ರೀಟ್ ಸಂಘಟನೆಯ ದಶಮಾನೋತ್ಸವ :ಉಚಿತ ಸಾಮೂಹಿಕ ಉಪನಯನ

Pinterest LinkedIn Tumblr

ಮಂಗಳೂರು : ನಗರದ ರಥಬೀದಿ, ಭವಂತಿಸ್ಟ್ರೀಟ್‌ನ ವಿಶ್ವಕರ್ಮ ಬಂಧುಗಳು ಸಂಘಟನೆಯ ದಶಮಾನೋತ್ಸವ‌ ಆಚರಣೆಯ ಸಲುವಾಗಿ ವಿಶ್ವಕರ್ಮ ಸಮಾಜದ 19 ಮಂದಿ ವಟುಗಳಿಗೆ ‘ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕದೇವಸ್ಥಾನದ‌ಆವರಣದಲ್ಲಿಜರಗಿದ ಸಮಾರಂಭದಲ್ಲಿ ಸಾನಿಧ್ಯವಹಿಸಿದ್ದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧಿಪತಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚನವಿತ್ತರು.

ನಿತ್ಯ ಸಂಧ್ಯಾವಂದನೆ ಹಾಗೂ ಇತರ ಅನುಷ್ಠಾನಗಳ ಬಗೆಗಿನ ಮಹತ್ವವನ್ನು ಸ್ವಾಮೀಜಿಯವರು ತಿಳಿಸಿದರಲ್ಲದೆ, ಗಾಯತ್ರಿ ಮಂತ್ರದಕುರಿತಾಗಿಯೂ ವಿವರಿಸಿ ಸಂಧ್ಯಾವಂದನೆ ಪುಸ್ತಕ ಹಾಗೂ ಮಂತ್ರಾಕ್ಷತೆ ನೀಡಿ ವಟುಗಳನ್ನು ಹರಿಸಿದರು.

ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಸಂಘಟನೆಯ‌ಅಧ್ಯಕ್ಷ ಹೇಮಂತ್‌ಆಚಾರ್ಯ,ಗೌರವಾಧ್ಯಕ್ಷ‌ಅಚ್ಚುತ‌ಆಚಾರ್ಯ, ಕಾರ್ಯದರ್ಶಿ ಪ್ರಶಾಂತ್ ಪಾಳಿಗೆ, ಕೋಶಾಧಿಕಾರಿಗಣೇಶ್‌ಆಚಾರ್ಯಕೆಮ್ಮಣ್ಣು ಉಪಸ್ಥಿತರಿದ್ದರು.

ಉಪನಯನ ಸಂಸ್ಕಾರದ ವೈದಿಕ ವಿಧಿಯ ನೇತೃತ್ವ ವಹಿಸಿದ ಕ್ಷೇತ್ರದ ಪ್ರಧಾನ‌ಆರ್ಚಕಧನಂಜಯ ಪುರೋಹಿತ್‌ ಅವರನ್ನು‌ ಅಭಿನಂದಿಸಲಾಯ್ತು. ಪಶುಪತಿ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

Comments are closed.