ಕರಾವಳಿ

ತಂದೆ ಪರ ಪುತ್ರಿ ಮತಯಾಚನೆ: ಪ್ರಮೋದ್ ಮಧ್ವರಾಜ್ ಪುತ್ರಿ ಪ್ರತ್ಯಕ್ಷಾ ರಾಜ್ ಪ್ರಚಾರ!

Pinterest LinkedIn Tumblr

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರವಾಗಿ ಅವರ ಪುತ್ರಿಯಾದ ಪ್ರತ್ಯಕ್ಷಾ ರಾಜ್ ಅವರು ಪ್ರಚಾರ ನಡೆಸುತ್ತಿದ್ದಾರೆ.

ಪ್ರಮೋದ್ ಮಧ್ವರಾಜರ ಸುಪುತ್ರಿಯಾದ ಪ್ರತ್ಯಕ್ಷ ಪ್ರಮೋದ್ ರಾಜ್ ಮೊದಲ ಬಾರಿಗೆ ತಂದೆಯ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಮಣಿಪಾಲ ಮತ್ತು ಪರ್ಕಳ ಪರಿಸರದಲ್ಲಿ ಇಂದು ಬೆಳಿಗ್ಗೆಯಿಂದ ಪ್ರಚಾರ ಮಾಡುತ್ತಿದ್ದಾರೆ.ಜೆಡಿಎಸ್-ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಎಂದು ಯುವತಿಯರಲ್ಲಿ,ಯುವರಕಲ್ಲಿ ಮತ್ತು ಸಾರ್ವಜನಿಕರಲ್ಲಿ ವಿನಂತಿಸುತ್ತಿದ್ದಾರೆ.

ಪ್ರತ್ಯಕ್ಷ ರಾಜ್ ಜೊತೆಗೆ ಕಾಂಗ್ರೆಸ್ ಮುಖಂಡೆ ವೆರೊನಿಕಾ ಕರ್ನಲಿಯೋ, ನಗರ ಸಭಾ ಸದಸ್ಯ ರಮೇಶ್ ಕಾಂಚನ್, ಸುಕೇಶ್ ಕುಂದರ್ ಮತ್ತು ಎರಡು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.