ಕರಾವಳಿ

ಅಶೋಕನಗರ ಶಾಲೆಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

Pinterest LinkedIn Tumblr

ಮಂಗಳೂರು ; ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯಲ್ಲಿತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಶಾಲಾ ಸಂಚಾಲಕರಾದ ಬಿ.ಶ್ರೀನಿವಾಸ ರಾವ್‌ಇವರ ಉಪಸ್ಥಿತಿಯಲ್ಲಿ ಶಾಲಾ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಕೆ.ಜಿ.ಪಾಟೀಲ್, ಶಿಕ್ಷಕರಾದ ನಳಿನಿ ಎ., ಜಯಶ್ರೀ, ರೇಖಾರಾಠೋಡ್, ಶೈಲಜಾ ಬಾರಧ್ವಜ್, ಕುಮಾರಿ ಮಂಗಳ ಹಾಗೂ ಹಳೆವಿದ್ಯಾರ್ಥಿ ಸಂಘದಗೌರವಾಧ್ಯಕ್ಷರಾಧಕೃಷ್ಣ, ಅಧ್ಯಕ್ಷ ಬಿ.ಆನಂದಕರ್ಕೇರ, ಪ್ರಧಾನ ಕಾರ್ಯದರ್ಶಿ ಬಿ.ಶ್ರೀನಿವಾಸ ಮತ್ತು ಸಮಿತಿ ಸದಸ್ಯೆ ಲೀಲಾವತಿ ಬಿ.ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ತಮ್ಮ ಮನದಾಳದ ಮಾತನ್ನು ತಿಳಿಸಿ ವಿದ್ಯಾರ್ಥಿಜೀವನಕ್ಕೆ ಸಹಕರಿಸಿದ ಸಂಘ ಸಂಸ್ಥೆಗಳಿಗೆ ಹಾಗೂ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು.

ಶಾಲಾ ಸಂಚಾಲಕ ಶ್ರೀನಿವಾಸರವರು ಮಾತನಾಡಿ ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾಭ್ಯಾಸ ಪಡೆದು‌ಉತ್ತಮ ಪ್ರಜೆಗಳಾಗಬೇಕು, ವಿದ್ಯೆ ನೀಡಿದ ಶಾಲೆ ಹಾಗೂ ಶಿಕ್ಷಕರನ್ನು ಎಂದಿಗೂ ಮರೆಯಬಾರದು.ಆದರ್ಶ ವ್ಯಕ್ತಿಗಳಾಗಿ ಹೆತ್ತವರನ್ನುಗೌರವಿಸಬೇಕು ಎಂದು ತಿಳಿಸಿ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.

ಶಿಕ್ಷಕರು ಹಾಗೂ ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮಕ್ಕಳ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದರು.ಈ ಸಂದರ್ಭ‌ಎಲ್ಲಾ ವಿದ್ಯಾರ್ಥಿಗಳಿಂದ ಅರ್ಜಿ ಪಡೆದು ಹಳೆವಿದ್ಯಾರ್ಥಿ ಸಂಘದ ಸದಸ್ಯರಾಗಿ ಸಂಘಕ್ಕೆ ಸೇರ್ಪಡಿಸಲಾಯಿತು. ಕುಮಾರಿ‌ ಅಮೃತ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Comments are closed.