ಕರಾವಳಿ

ಮಂಡಿನೋವು ನಿವಾರಣೆಗೆ ನಿಂಬೆಹಣ್ಣು ಮತ್ತು ಎಳ್ಳೆಣ್ಣೆಯ ಸಮಾಗಮ ಉತ್ತಮ ಮೆಡಿಸಿನ್

Pinterest LinkedIn Tumblr

 ಮಂಡಿ ನೋವು ಈಗ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಈ ಮುಂಚೆ ಮಂಡಿ ನೋವು ಅಂದ್ರೆ ಅದು ಬರೀ ವಯಸ್ಸಾದವರಿಗೇ ಮಾತ್ರ ಇತ್ತು. ಈಗ ಹದಿ ಹರೆಯರಲ್ಲಿಯೂ ಮಂಡಿ ನೋವು ಕಾಣಿಸಿಕೊಳ್ತಾ ಇರೋದು ದುರಂತವೇ ಸರಿ. ಹದಿಹರೆಯರಲ್ಲಿ ಮಂಡಿ ನೋವಿಗೆ ಮುಖ್ಯ ಕಾರಣ ಅಂದ್ರೆ ಬೊಜ್ಜು. ಇನ್ನು ನಿಯಮಿತವಾದ ಆಹಾರ ಪದ್ಧತಿ ಇಲ್ಲದೇ ಇರೋದು, ವ್ಯಾಯಾಮ, ಯೋಗಾಸನ ಮಾಡದೇ ಇರೋದೂ ಕೂಡ ಈ ಮಂಡಿ ನೋವಿಗೆ ಕಾರಣವಾಗಬಹುದು.

ಅದಕ್ಕೆ ಹಿರಿಯರು ಹೇಳೋದು, ಹಿತಮಿತವಾಗಿ ಆಹಾರ ಸೇವನೆ ಜೊತೆಗೆ ದೇಹಕ್ಕೆ ವ್ಯಾಯಾಮ ಕೂಡ ಅಷ್ಟೇ ಅವಷ್ಯಕವಾಗಿ ಮಾಡಬೇಕು ಅಂತ. ಮಂಡಿ ನೋವು ಸಹಿಸಲಾಗದೇ ಅದೆಷ್ಟೋ ಜನ ಪೇನ್ ಕಿಲ್ಲರ್ ಮಾತ್ರೆಗೆ ಮೊರೆ ಹೋಗ್ತಾರೆ. ಆದ್ರೆ ಆ ಔಷಧಿಗಳೆಲ್ಲಾ ಕ್ಷಣಿಕ ಪರಿಣಾಮ ಬೀರುತ್ತವೆ. ಆದ್ರೆ ಅವುಗಳಿಂದಾಗುವ ಅಡ್ಡ ಪರಿಣಾಮ ಅಷ್ಟಿಷ್ಟಲ್ಲ. ಹಾಗಾಗಿ ಮಂಡಿ ನೋವಿಗೆ ಮಾತ್ರೆಗಳು ಬೇಡ. ಬದಲಾಗಿ ಈ ಮನೆ ಔಷಧಿ ಮಾಡಿ ನೋಡಿ. ಮಂಡಿ ನೋವು ಗುಣವಾಗುತ್ತೆ.

ಮಂಡಿ ನೋವು ನಿವಾರಣೆಗಾಗಿ ಮನೆ ಮದ್ದು ಅಂದ್ರೆ ಬರೀ ಎರಡೇ ಪದಾರ್ಥಗಳು ಸಾಕು.
1. ನಿಂಬೆ ಹಣ್ಣು
2. ಎಳ್ಳಿನ ಎಣ್ಣೆ

 ಔಷಧಿ ಹೀಗೆ ಮಾಡ್ಬೇಕು:
• ಎರೆಡು ಮೂರು ನಿಂಬೆ ಹಣ್ಣುಗಳ ತುಂಡುಗಳನ್ನು ಒಂದು ಶುಭ್ರವಾದ ಹತ್ತಿ ಬಟ್ಟೆಯಲ್ಲಿ ಹಾಕಿ.
• ಎಳ್ಳಿನ ಎಣ್ಣೆಯನ್ನು ತೆಗೆದುಕೊಂಡು ಕೊಂಚ ಬಿಸಿ ಮಾಡಿ.
• ಎಣ್ಣೆ ತಣ್ಣಗಾದ ನಂತರ ನಿಂಬೆ ಹಣ್ಣಿನ ತುಂಡುಗಳಿರೋ ಬಟ್ಟೆಯನ್ನು ಎಣ್ಣೆಯಲ್ಲಿ ಮುಳುಗಿಸಿ.
• ನಿಂಬೆ ಹಣ್ಣುಗಳ ಸಮೇತ ಆ ಬಟ್ಟೆಯನ್ನು ಮಂಡಿಗೆ ಕಟ್ಟಿಕೊಳ್ಳಿ.
• 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ.

Comments are closed.