ಕರಾವಳಿ

ಮಂಗಳೂರಿನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರ ಸೆರೆ ; ರೂ. 4.25 ಲಕ್ಷ ನಗದು ವಶ

Pinterest LinkedIn Tumblr

ಮಂಗಳೂರು : ನಗರದ ಮಠದಕಣಿ ಬಳಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಧಂದೆಯಲ್ಲಿ ನಿರತರಾಗಿದ್ದ ಮೂವರು ಆರೋಪಿಗಳನ್ನು ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಗಳನ್ನು ಮಠದಕಣಿ 5 ನೇ ಕ್ರಾಸ್‌ನ ನಿವಾಸಿಗಳಾದ ಸುನಿಲ್ ಮೆಲ್ವಿನ್ ರೇಗೋ (42), ಸಂತೋಷ್ ಜಾನ್ (47) ಹಾಗೂ ಉಳ್ಳಾಲದ ಅಶೋಕ್ ಅಂಚನ್ (46) ಎಂದು ಗುರುತಿಸಲಾಗಿದೆ.

ಆರೋಪಿಗಳು ಮಂಗಳೂರು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಠದಕಣಿ ರಸ್ತೆಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಧಂದೆಯಲ್ಲಿ ನಿರತರಾಗಿದ್ದು, ಹಣಕ್ಕಾಗಿ ಸಾರ್ವಜನಿಕರಿಗೆ BETPRO ಎಂಬ ಮೊಬೈಲ್ ಅಪ್ನ ಪಾಸ್ ವಾರ್ಡ್ ಗಳನ್ನು ನೀಡಿ ಹಣವನ್ನು ಸಂಗ್ರಹಿಸುತ್ತಿದ್ದ ಸಂದರ್ಭ ಸಿಸಿಬಿ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕಾಗಿ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಗಾಗಿ BETPRO ಎಂಬ ಮೊಬೈಲ್ ಆಪ್ ನ ಪಾಸ್ ವಾರ್ಡ್ ಗಾಗಿ ಸಾರ್ವಜನಿಕರಿಂದ ಹಣವನ್ನು ವಂಚನೆ ಮಾಡುವ ಮೂಲಕ ಸಂಗ್ರಹಿಸಿದ ಒಟ್ಟು ರೂ. 4,25,000/- ನಗದು ಮತ್ತು 5 ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 4,50,000/- ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಬೆಟ್ಟಿಂಗ್ ದಂಧೆಗಾಗಿ BETPRO ಎಂಬ ಮೊಬೈಲ್ ಅಪ್ ನ್ನು ಡೌನ್ ಲೋಡ್ ಮಾಡಿದ ಗ್ರಾಹಕರಿಗೆ ಈ ಅಪ್ ಗೆ ಹಣವನ್ನು ರೀಚಾರ್ಜ್ ಮಾಡಲು ಹಾಗೂ ಈ ಮೊಬೈಲ್ ಅಪ್ ನ ಪಾಸ್ ವಾರ್ಡ್ ಗಾಗಿ ಹಣವನ್ನು ಸಂಗ್ರಹಿಸಿ ನಂತರ ವಿದೇಶದಲ್ಲಿರುವ ಅರುಣ್ ಮೊಂತೆರೋ ಹಾಗೂ ಕಿರಣ್ ಎಂಬವರಿಗೆ ಹಣವನ್ನು ಸಂದಾಯ ಮಾಡಿದಾಗ ಅವರು BETPRO ಎಂಬ ಮೊಬೈಲ್ ಅಪ್ ನ ಪಾಸ್ ವಾರ್ಡ್ ನ್ನು ಗ್ರಾಹಕರಿಗೆ ನೀಡುತ್ತಿದ್ದರು. ಈ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕೃತ್ಯದಲ್ಲಿ ಇನ್ನು ಇತರರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ರವರ ನಿರ್ದೇಶನದಲ್ಲಿ ಪೊಲೀಸ್ ಉಪ ಆಯುಕ್ತರು( ಕಾ ಮತ್ತು ಸು) ರವರಾದ ಹನುಮಂತರಾಯ, ಐ.ಪಿ.ಎಸ್ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯರವರಾದ ಶ್ರೀಮತಿ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯನ್ನು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಆರ್ ನಾಯ್ಕ್, ಪಿಎಸ್ಐ ಯವರಾದ ಕಬ್ಬಾಳ್ ರಾಜ್, ಶಂಕರ ನಾಯರಿ ಮತ್ತು ಸಿಸಿಬಿ ಸಿಬ್ಬಂದಿಗಳು ಹಾಗೂ ಮಂಗಳೂರು ಬರ್ಕೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸೂರಜ್ , ಪಿಎಸ್ಐ ಶ್ರೀಮತಿ ಹೀರಾವತಿ ಮತ್ತು ಸಿಬ್ಬಂದಿಗಳು ಪಾಲ್ಗೊಡಿದ್ದರು.

Comments are closed.