ಕರಾವಳಿ

ಸುಭದ್ರ ಭಾರತಕ್ಕಾಗಿ ಬಿಜೆಪಿ ಬೆಂಬಲಿಸಿ : ನಳಿನ್ ಕುಮಾರ್ ಕಟೀಲ್

Pinterest LinkedIn Tumblr

ಮಂಗಳೂರು : ಕಳೆದ ಐದು ವರ್ಷಗಳಿಂದ ನರೇಂದ್ರ ಮೋದಿಯವರ ಕೈಯಲ್ಲಿ ಭಾರತ ಬಲಾಡ್ಯವಾಗಿ,ಸುಭದ್ರವಾಗಿ ವಿಶ್ವದೆದುರು ಎದೆಯುಬ್ಬಿಸಿ ನಿಂತಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಾಗುರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಈ ಹಿಂದೆ ಭಾರತಕ್ಕೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಪ್ರಮುಖರು ಭೇಟಿ ಕೊಟ್ಟಾಗ ಅವರಿಗೆ ಭಾರತವನ್ನು ಪರಿಚಯಿಸುವಲ್ಲಿ ಕಾಂಗ್ರೇಸ್ ನಿರಾಸಕ್ತಿ ತೋರಿಸಿದೆ.ಆದರೆ ಕಳೆದ ಐದು ವರ್ಷಗಳಿಂದ ಪ್ರಧಾನಿ ಮೋದಿಜೀ ಅವರು ಭಾರತದ ಪರಂಪರೆ ಆಚಾರ ವಿಚಾರಗಳನ್ನು ಜಗತ್ತಿನ ಮುಂದೆ ತೆರೆದಿಡುವ ಮೂಲಕ ಭಾರತದ ಆಂತರಿಕ ಸತ್ವಗಳನ್ನು ಜಗತ್ತಿನೆಲ್ಲೆಡೆ ಪಸರಿಸಿದ್ದಾರೆ ಎಂದರು.

ಯಶಸ್ವಿ ರಾಜತಾಂತ್ರಿಕ ನೀತಿ,ಜನ ಸಾಮಾನ್ಯರ ಕರೆಗೂ ತಕ್ಷಣವೇ ಸ್ಪಂದಿಸುವ ಸಚಿವರನ್ನು ನರೇಂದ್ರ ಮೋದಿಯ ಹೊರತಾಗಿ ಬೇರಾವ ಸರಕಾರದಿಂದಲೂ ನಿರೀಕ್ಷಿಸಲಾಗದು ಎಂದು ಹೇಳಿದರು.

ಕಾಂಗ್ರೇಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ:

ಈ ಕಾರ್ಯಕ್ರಮದಲ್ಲಿ ಅಳಪೆ ಉತ್ತರ ವಾರ್ಡಿನ ಶಿವನಗರದ ಸುಮಾರು 12 ಜನ ಕಾಂಗ್ರೇಸ್ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ್ ಜೆ ಪೂಜಾರಿ,ಬಿಜೆಪಿ ಅಳಪೆ ಉತ್ತರ ವಾರ್ಡ್ ಅದ್ಯಕ್ಷ ನರೇಶ್, ವಾರ್ಡ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ನಿಡ್ಡೇಲ್ ಅವರ ಮುಂದಾಳುತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಧ್ವಜ ನೀಡುವ ಮೂಲಕ ಅವರನ್ನು ಬಿಜೆಪಿಗೆ ಸ್ವಾಗತಿಸಿದರು.

ಸಾರ್ವಜನಿಕ ಸಭೆಯ ವೇದಿಕೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಮಾಜಿ ಶಾಸಕ ಎನ್. ಯೋಗೀಶ್ ಭಟ್, ನಾಗರಾಜ್ ಶೆಟ್ಟಿ, ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ಮೋನಪ್ಪ ಭಂಡಾರಿ, ರಮೇಶ್ ಕಂಡೇಟು, ಜಿತೇಂದ್ರ ಕೊಟ್ಟಾರಿ , ಪ್ರೇಮಾನಂದ ಶೆಟ್ಟಿ , ಭಾಸ್ಕರ್ ಚಂದ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು .

Comments are closed.