ಕರಾವಳಿ

ನಳಿನ್ ಕುಮಾರ್ ಮತಯಾಚನೆ : ಚುನಾವಣಾ ಅಖಾಡಕ್ಕೆ ದುಮುಕಿದ ಮಾಜಿ ಸಚಿವ ಪಾಲೆಮಾರ್

Pinterest LinkedIn Tumblr

ಮಂಗಳೂರು : ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಭ್ಯರ್ಥಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ರವಿವಾರ ಮುಂಜಾನೆ ಮಂಗಳೂರಿನ ಕದ್ರಿ ಪಾರ್ಕ್ ಬಳಿ ಹಾಗೂ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ಪರಿಸರದಲ್ಲಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಈಗಾಗಲೇ ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿರೋಧ ಕಟ್ಟಿಕೊಂಡಿದ್ದಾರೆ ಎನ್ನಲಾದ ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ನಳಿನ್ ಕುಮಾರ್ ಕಟೀಲ್ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸುವ ಮೂಲಕ ಪಕ್ಷದಲ್ಲಿ ಯಾವೂದೇ ಭಿನ್ನಭಿಪ್ರಾಯಗಳಿಲ್ಲ ಎಂಬುದನ್ನು ಸಾರಿದರು.

ಈ ವೇಳೆ ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕ ಯೋಗೀಶ್ ಭಟ್,ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ, ಮಾಜಿ ಕಾರ್ಪೊರೇಟರ್ದ ಸುಧೀರ್ ಶೆಟ್ಟಿ, ಪ್ರೇಮಾನಂದ್ ಶೆಟ್ಟಿ, ರೂಪ ಬಂಗೇರ, ಪಕ್ಷದ ಮುಖಂಡರಾದ ರಾಜ್ ಗೋಪಾಲ್ ರೈ, ಸಂಧ್ಯಾ ವೆಂಕಟೇಶ್ ಹಾಗೂ ಪಕ್ಷದ ಪ್ರಮುಖರು ಜೊತೆಗಿದ್ದರು.

Comments are closed.