ಅಂತರಾಷ್ಟ್ರೀಯ

ಅಮೆರಿಕದ ಫ್ಲೋರಿಡಾದಲ್ಲಿ ಅತೀ ದೊಡ್ಡ ಹೆಬ್ಬಾವು ಸೆರೆ; ಇದರ ಉದ್ದ 17 ಅಡಿ, ತೂಕ 40 ಪೌಂಡ್!

Pinterest LinkedIn Tumblr

ಮಯಾಮಿ: ಇದೇ ಮೊದಲ ಬಾರಿಗೆ ಅಮೆರಿಕದ ಫ್ಲೋರಿಡಾದಲ್ಲಿ 17 ಅಡಿ ಉದ್ದದ ಹೆಣ್ಣು ಹೆಬ್ಬಾವೊಂದನ್ನು ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ.

ಈ ಹೆಬ್ಬಾವು ಸುಮಾರು 17 ಅಡಿ ಉದ್ದ ಇದ್ದು ಬರೋಬ್ಬರಿ 40 ಪೌಂಡ್ ತೂಕವಿದೆ. ಅಲ್ಲದೆ ಮೊಟ್ಟೆ ಇಡುವ ಹಂತದಲ್ಲಿರುವ ಹೆಬ್ಬಾವಿನಲ್ಲಿ 73 ಮೊಟ್ಟೆಗಳಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಅಮೆರಿಕದಲ್ಲಿ ಈವರೆಗೆ ಸೆರೆ ಹಿಡಿದಿರುವ ದೊಡ್ಡ ಹೆಬ್ಬಾವು ಇದಾಗಿದ್ದು ದಕ್ಷಿಣ ಫ್ಲೋರಿಡಾದಲ್ಲಿರುವ ಬಿಗ್ ಸೈರ್ಪಸ್ ನ್ಯಾಶನಲ್ ಪ್ರಿಸರ್ವ್ ನಿಂದ ಇದನ್ನು ಸೆರೆ ಹಿಡಿಯಲಾಗಿದೆ. ಈ ಹೆಬ್ಬಾವನ್ನು ಪತ್ತೆ ಹಚ್ಚಲು ವಿಜ್ಞಾನಿಗಳು ಹೊಸ ಬಗೆಯ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ.

Comments are closed.