ಕರಾವಳಿ

ಮೋದಿ ಬ್ರಾಂಡ್ ಸೀರೆ ಮಾರಾಟದ ಆರೋಪ: ಸೀರೆ ಮಳಿಗೆಗೆ ಚುನಾವಣಾಧಿಕಾರಿಗಳು ದಾಳಿ!

Pinterest LinkedIn Tumblr

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಇರುವ ಸೀರೆಯನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆ ಉಡುಪಿಯ ಪ್ರಸಿದ್ಧ ಬಟ್ಟೆ ಮಳಿಗೆಗೆ ಚುನಾವಣಾ ಆಯೋಗದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ಮೋದಿ ಬ್ರಾಂಡ್ ಸೀರೆ ಮಾರಾಟದ ಶಂಕೆಯಲ್ಲಿ ಉದ್ಯಾವರ ಜಯಲಕ್ಷ್ಮಿ ಕ್ಲೋತ್ ಸ್ಟೋರ್ಸ್ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ. ಮೋದಿ ಸೀರೆ ಮಾರಾಟದ ಬಿಲ್ ಸಿಕ್ಕಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನೇತೃತ್ವದ ತಂಡ ಪೊಲೀಸರ ಭದ್ರತೆಯಲ್ಲಿ ಪರಿಶೀಲನೆ ನಡೆಸಿದೆ.

Comments are closed.