ಈರುಳ್ಳಿಯನ್ನು ಸಾಮಾನ್ಯವಾಗಿ ಎಲ್ಲಾ ತರಹದ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಜೊತೆಯಲ್ಲಿ ಅನೇಕ ಔಷಧಿಗಳಲ್ಲಿ ಸಹ ಈರುಳ್ಳಿಯನ್ನು ಬಳಸುತ್ತಾರೆ.ಎಲ್ಲರಿಗೂ ಗೊತ್ತಿರುವಂತೆ ಈರುಳ್ಳಿಯ ಸಿಪ್ಪೆಯನ್ನು ಸಾಮಾನ್ಯವಾಗಿ ಕಸದ ಬುಟ್ಟಿಕ್ಕೆ ಎಸೆಯುತ್ತಾರೆ.ಹೌದು, ಮತ್ತೆ ಇನ್ನೇನು ಮಾಡೋದಕ್ಕೆ ಆಗುತ್ತೆ ಅಂತ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಮುಡಿರಬಹುದಲ್ವಾ..
ದೇಹದ ಒಳಭಾಗ ಮತ್ತು ಚರ್ಮವನ್ನು ಸ್ವಚ್ಛ ಮಾಡುತ್ತೆ..
ಆದರೆ ಹೀಗೆ ಕಸದ ಬುಟ್ಟಿಗೆ ಸೇರುವ ಈರುಳ್ಳಿ ಸಿಪ್ಪೆಯಲ್ಲೂ ಕೂಡ ಸಾಕಷ್ಟು ಔಷಧ ಗುಣಗಳು ಇವೆಯಂತೆ!ಹೌದು, ಈರುಳ್ಳಿ ಆ್ಯಂಟಿ ಆಕ್ಸಿಡೆಂಟ್ ಗುಣ ಹೊಂದಿದ್ದು ಈ ಸಿಪ್ಪೆಯನ್ನು ಬಿಸಾಡದೆ ಟೀ ಅಥವಾ ಸೂಪ್ ಮಾಡುವ ಸಮಯದಲ್ಲಿ ಈ ಸಿಪ್ಪೆಯನ್ನು ಹಾಕಿ ಕುದಿಸಬೇಕು.
ಇದು ಆ್ಯಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಕಾರಣ ದೇಹದ ಒಳಭಾಗ ಮತ್ತು ಚರ್ಮವನ್ನು ಸ್ವಚ್ಛ ಮಾಡುತ್ತದೆ.ಇದರ ಜೊತೆಗೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಗಂಟಲು ನೋವನ್ನು ಗುಣಪಡಿಸುತ್ತೆ ಈರುಳ್ಳಿ ಸಿಪ್ಪೆಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಈ ನೀರನ್ನು ಬಾಯಲ್ಲಿ ಹಾಕಿಕೊಂಡು ಮುಕ್ಕಳಿಸಿದ್ರೆ, ಗಂಟಲು ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಮುಖದ ಕಲೆಯನ್ನು ಹೋಗಲಾಡಿಸುತ್ತೆ..
ಸ್ವಲ್ಪ ರಸವಿರುವ ಈರುಳ್ಳಿ ಸಿಪ್ಪೆಯನ್ನು ತೆಗೆದುಕೊಳ್ಳಿ.ಅದಕ್ಕೆ ಸ್ವಲ್ಪ ಅರಿಶಿನವನ್ನು ಮಿಕ್ಸ್ ಮಾಡಿ. ನಂತರ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ.ನಂತರ ಒಣಗಿದ ಕೈನಲ್ಲಿ .ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ.ವಾರಕ್ಕೊಮ್ಮೆ ಈ ರೀತಿ ಈರುಳ್ಳಿ ಸಿಪ್ಪೆಯನ್ನು ರೆಡಿ ಮಾಡಿಕೊಂಡು ಮುಖಕ್ಕೆ ಮಸಾಜ್ ಮಾಡಿಕೊಳ್ಳಿ.ಇದರಿಂದ ನಿಮ್ಮ ಮುಖದ ಕಲೆಗಳು ದೂರವಾಗುತ್ತವೆ.
Comments are closed.