ಕರಾವಳಿ

ದೇಹವನ್ನು ತಂಪಾಗಿಸುವ ಹಣ್ಣುಗಳು  ತಪ್ಪದೆ ಸೇವಿಸಿ ಬೇಸಿಗೆಯಲ್ಲಿ ಆರೋಗ್ಯವನ್ನ ಕಾಪಾಡಿ

Pinterest LinkedIn Tumblr
 
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸ ನಾವು ವಿಭಿನ್ನ ರೀತಿಯ ಪಾನಿಯಗಳಿಗೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಇಂತಹ ಸಮಯದಲ್ಲಿ ನೀರಿನ ಅಂಶ ಹೆಚ್ಚಿರುವ ಕಲ್ಲಂಗಡಿ, ಕರ್ಬೂಜ ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು. ನೀರು, ಜ್ಯೂಸ್ ಕುಡಿದರೂ ಬಾಯಾರಿಕೆ ನಿಲ್ಲುವುದಿಲ್ಲ. ಅಲ್ಲದೆ ಬೇಗನೆ ಸುಸ್ತಾಗುತ್ತದೆ. ಈ ಸಮಯದಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರಕ್ರಮದಲ್ಲಿ ಕೆಲವೊಂದು ಬದಲಾವಣೆ ತರಬೇಕಾಗುತ್ತದೆ. ಬೇಸಿಗೆಯಲ್ಲಿ ಈ ಕೆಳಗಿನ ಆಹಾರವನ್ನು ಸೇರಿಸಿದರೆ ತೂಕ ಕಡಿಮೆ ಮಾಡಬಹುದು ಮತ್ತು ನಿಮ್ಮ ದೇಹದ ಆರೋಗ್ಯ ಕೂಡ ಹೆಚ್ಚುತ್ತದೆ
ಕಲ್ಲಂಗಡಿ: ಕಲ್ಲಂಗಡಿ, ಕರ್ಬೂಜ ಹಣ್ಣುಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ತಿನ್ನಬೇಕು. ಸೆಕೆಗೆ ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ. ಈ ಹಣ್ಣುಗಳನ್ನು ತಿನ್ನುವುದು ಮಧುಮೇಹ ರೋಗಿಗಳ ಆರೋಗ್ಯಕ್ಕೆ ಕೂಡ ಒಳ್ಳೆಯದು.
ಮಾವಿನ ಹಣ್ಣು: ಮಾವಿನ ಹಣ್ಣಿನಲ್ಲಿ ನಾರಿನಂಶ ಅಧಿಕವಾಗಿ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಇರುವುದರಿಂದ ತ್ವಚೆ ಹೊಳಪು ಹೆಚ್ಚುತ್ತದೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ತುಂಬಾ ತೆಳ್ಳಗೆ ಇದ್ದವರು ಇದನ್ನು ತಿನ್ನುವುದು ಒಳ್ಳೆಯದು. ದಪ್ಪಗಿದ್ದವರು ಮಿತಿಯಲ್ಲಿ ತಿನ್ನಬೇಕು. ಅಲ್ಲದ ವಿಟಮಿನ್ ಸಿ ಇದ್ದು ಇದು ದೇಹದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಬೀಟ್‌ರೂಟ್: ಬೀಟ್‌ರೂಟ್‌ನಲ್ಲಿ ದೇಹದಲ್ಲಿರುವ ಕಶ್ಮಲಗಳನ್ನು ಹೊರಗೆ ಹಾಕುತ್ತದೆ. ಅಲ್ಲದೆ ದೇಹದಲ್ಲಿ ರಕ್ತ ಹೆಚ್ಚಾಗುವಂತೆ ಮಾಡುತ್ತದೆ.
ಸೇಬುಹಣ್ಣುಗಳು: ಬೇಸಿಗೆಯ ಕಾಲದಲ್ಲಿ ಈ ಹಣ್ಣು ನಿಮಗೆ ಇನ್ನಷ್ಟು ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ. ಇವುಗಳು ಕೆಂಪು ಮತ್ತು ಹಸಿರು ಬಣ್ಣದಲ್ಲಿರುತ್ತವೆ. ಸಕ್ಕರೆ ಅಂಶ ಕಡಿಮೆ ಇರುವ ಹೊರತಾಗಿಯೂ, ಸೇಬು ತನ್ನಲ್ಲಿ ವಿಟಮಿನ್ ಸಿ ಮತ್ತು ಜೀವಾಣುಗಳನ್ನು ವರ್ಜಿಸುವ ನಾರಿನಂಶ ಮತ್ತು ಕೊಲೆಸ್ಟ್ರಾಲ್ ನಿರ್ವಹಣೆಗೆ ಸಹಾಯ ಮಾಡುತ್ತದೆ.
ನಿಂಬೆ ಹಣ್ಣಿನ ಜ್ಯೂಸ್: ಬೆಳಗ್ಗೆ ಒಂದು ಲೋಟ ನಿಂಬೆ ಜ್ಯೂಸ್ ಕುಡಿದರೆ ತೂಕ ಕಮ್ಮಿಯಾಗುವುದರ ಜೊತೆಗೆ ದಿನಕ್ಕೆ ಒಂದು ಲೋಟ ನಿಂಬೆ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಆಹಾರದಲ್ಲಿರುವ ಅಸಿಡಿಟಿ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

Comments are closed.