ಕರಾವಳಿ

ಅಸ್ತಮಾ ಸಮಸ್ಯೆಯಿಂದ ಬಳಲುವವರು ಹೆಚ್ಚು ಏಲಕ್ಕಿ ಸೇವಿಸಿದರೆ ಉತ್ತಮ

Pinterest LinkedIn Tumblr

ಪ್ರತಿಯೊಬ್ಬರಿಗೂ ಏಲಕ್ಕಿ ಸುವಾಸನೆಯೆಂದರೆ ಇಷ್ಟ. ಏಲಕ್ಕಿ ಪರಿಮಳಯುಕ್ತ ಪದಾರ್ಥ. ಹೆಚ್ಚಾಗಿ ಸಾಂಬಾರ ಪದಾರ್ಥವಾಗಿ ಉಪಯೋಗವಾಗುವ ಇದು ಹೊಂದಿರುವ ಔಷಧೀಯ ಉಪಯೋಗಗಳು ಅಸಂಖ್ಯ. ಭಾರತೀಯರ ಪ್ರತಿಯೊಂದು ಅಡುಗೆ ಮನೆಯಲ್ಲಿ ಇರುವಂತಹ, ಆಹಾರದ ರುಚಿ ಹಾಗೂ ಸುವಾಸನೆ ಹೆಚ್ಚಿಸುವ ಶ್ರೇಯಸ್ಸು ಪಡೆದಿರುವ ಏಲಕ್ಕಿಯ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ,ಗಿಡದ ಬುಡದಲ್ಲಿ ಬೆಳೆಯುವ ಇದು ವಾಣಿಜ್ಯ ಬೆಳೆಯಾಗಿಯೂ ಪ್ರಸಿದ್ಧಿ.

ಏಲಕ್ಕಿ ಹಾಕಿದ ನೀರು ಒಂದು ವಾರ ಕಾಲ ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು. ಇದು ಹಲ್ಲಿನ ಸಮಸ್ಯೆ ಮತ್ತು ಜೀರ್ಣಕ್ರಿಯೆಗೆ ತುಂಬಾ ಪರಿಣಾಮಕಾರಿ. ಇದು ಬಾಯಿಯ ದುರ್ವಾಸನೆ ನಿವಾರಣೆ ಮಾಡಿ, ತಾಜಾ ಉಸಿರು ನೀಡುವುದು.ಇದು ತುಂಬಾ ಸಣ್ಣ ಬೀಜವಾದರೂ ಅದರಲ್ಲಿರುವ ಆರೋಗ್ಯ ಲಾಭಗಳು ಮಾತ್ರ ಅನೇಕ.

ದಂತ ಆರೋಗ್ಯಕಾರಿ
ಹೆಚ್ಚಿನ ಮೌಥ್ ಪ್ರೆಶ್ನರ್ ಮತ್ತು ಟೂಥ್ ಪೇಸ್ಟ್ ಗಳಲ್ಲಿ ಏಲಕ್ಕಿ ಬಳಸಲಾಗುತ್ತದೆ. ಇದು ಬಾಯಿಯ ದುರ್ವಾಸನೆ ತಡೆಯುವುದು ಮತ್ತು ಬ್ಯಾಕ್ಟೀರಿಯಾ ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು. ಬಾಯಿಯ ಅಲ್ಸರ್ ಹಾಗೂ ಸೋಂಕಿ ನಿಂದ ನಿವಾರಣೆ ನೀಡುವುದು.

ಕ್ಯಾನ್ಸರ್
ಕೆಲವಾರು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ನಿತ್ಯವೂ ಏಲಕ್ಕಿ ನೀರನ್ನು ಕುಡಿಯುವ ಮೂಲಕ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಕಣಗಳ ಬೆಳವಣಿಗೆ ನಿಯಂತ್ರಿಸುತ್ತದೆ ಹಾಗೂ ಈ ಮೂಲಕ ಕ್ಯಾನ್ಸರ್ ಎದುರಾಗುವ ಸಂಭವ ಕಡಿಮೆಯಾಗುತ್ತದೆ. ಅಲ್ಲದೇ ಕೆಲವು ಬಗೆಯ ಕ್ಯಾನ್ಸರ್ ಗೆ ಗುರಿಯಾದ ಜೀವಕೋಶಗಳನ್ನೂ ಕೊಲ್ಲುತ್ತದೆ.

ರೋಗನಿರೋಧಕ ಶಕ್ತಿ
ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವಲ್ಲಿ ಏಲಕ್ಕಿ ನೀರು ಪ್ರಮುಖ ಪಾತ್ರ ವಹಿಸುವುದು. ಇದು ಹಲವಾರು ರಿತಿಯ ವೈರಲ್ ಮತ್ತು ಜ್ವರದ ಸೋಂಕಿನ ವಿರುದ್ಧ ಹೋರಾಡುವುದು ಮತ್ತು ದೇಹಕ್ಕೆ ರಕ್ಷಣೆ ನೀಡುವುದು. ಗಂಟಲಿನ ಸೋಂಕು ಉಂಟಾಗಿದ್ದರೂ ನೀವು ಇದನ್ನು ಏಲಕ್ಕಿ ನೀರಿನಿಂದ ನಿವಾರಣೆ ಮಾಡಬಹುದು. ಶ್ವಾಸನಾಳಗಳ ಒಳಪೊರೆಯ ಉರಿಯೂತ ತಡೆಯುವುದು.

ದೇಹದಲ್ಲಿರುವ ವಿಷಕಾರಿ ಅಂಶ ಹೊರಹಾಕಲು
ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಏಲಕ್ಕಿ ನೀರು ಪ್ರಮುಖ ಪಾತ್ರ ವಹಿಸುವುದು. ಕಿಡ್ನಿ ಮೂಲಕ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ನೆರವಾಗುವುದು.

ಶೀತ
ಈ ಅದ್ಭುತ ನೀರನ್ನು ನಿತ್ಯವೂ ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಶೀತ, ಫ್ಲೂ ಮೊದಲಾದ ತೊಂದರೆಗಳಿಂದ ರಕ್ಷಣೆ ದೊರಕುತ್ತದೆ. ಅಲ್ಲದೇ ಶ್ವಾಸಕೋಶದ ತೊಂದರೆಯಾದ ಬ್ರಾಂಖೈಟಿಸ್ ಹಾಗೂ ಕೆಮ್ಮು, ಕಫ ಮೊದಲಾದ ತೊಂದರೆಗಳನ್ನೂ ನಿವಾರಿಸುತ್ತದೆ.

ಏಲಕ್ಕಿ ಇನ್ನು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾದವು…
ಶ್ವಾಸಕೋಶದಲ್ಲಿ ನೋವುಂಟಾದರೆ ಏಲಕ್ಕಿ ಸೇವನೆಯಿಂದ ನಿವಾರಣೆಯಾಗುತ್ತದೆ.
ಆ್ಯಸಿಡಿಟಿಯಿಂದ ತೇಗು ಬರುತ್ತಿದ್ದರೆ ಏಲಕ್ಕಿ ಸೇವನೆಯಿಂದ ಕಡಿಮೆಯಾಗುತ್ತದೆ.
ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಇದು ತಡೆಗಟ್ಟುತ್ತದೆ. ರಕ್ತ ಸಂಚಾರ ಸರಾಗವಾಗಲು ಸಹಾಯಮಾಡುತ್ತದೆ.
ಹೃದಯದ ಆರೋಗ್ಯವನ್ನೂ ಸಮಸ್ಥಿತಿಯಲ್ಲಿಡಲು ಇದು ಸಹಕಾರಿ.
ಅಸ್ತಮಾ ಸಮಸ್ಯೆಯಿಂದ ಬಳಲುವವರು ಹೆಚ್ಚು ಏಲಕ್ಕಿ ಉಪಯೋಗಿಸುವುದು ಒಳ್ಳೆಯದು.
ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ.
ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ ಎಂಬುದೂ ಸಂಶೋಧನೆಯಿಂದ ಸಾಬೀತಾಗಿದೆ.

Comments are closed.