ಅಂತರಾಷ್ಟ್ರೀಯ

ಭಾರತದಲ್ಲಿ ಇನ್ನೊಂದು ಉಗ್ರ ದಾಳಿ ನಡೆದರೆ ಗ್ರಹಚಾರ ನೆಟ್ಟಗಿರಲ್ಲ: ಪಾಕ್‌ಗೆ ಟ್ರಂಪ್ ಎಚ್ಚರಿಕೆ!

Pinterest LinkedIn Tumblr

ವಾಷಿಂಗ್ಟನ್: ಪುಲ್ವಾಮಾ ಉಗ್ರ ದಾಳಿ ಬಳಿಕ ಜಾಗತಿಕ ಮಟ್ಟದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದು ಭಾರತದಲ್ಲಿ ಇನ್ನೊಂದು ಉಗ್ರ ದಾಳಿ ನಡೆದಿದ್ದೇ ಆದಲ್ಲಿ ಪಾಕಿಸ್ತಾನಕ್ಕೆ ಗ್ರಹಚಾರ ನೆಟ್ಟಗಿರಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ಉಗ್ರ ದಾಳಿ ನಡೆದರೇ ಪಾಕಿಸ್ತಾನ ನಿಜಕ್ಕೂ ಆ ಬಳಿಕ ಅತ್ಯಂತ ಕಷ್ಟಕರ ದಿನಗಳನ್ನು ಎದುರಿಸಲಿದೆ. ಉಗ್ರರ ಶಮನ ಮಾಡುವ ನಿಟ್ಟಿನಲ್ಲಿ ಪಾಕ್ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎನ್ನುವುದು ನಾವು ಗಮನಿಸಬೇಕಿದೆ. ಇಲ್ಲವಾದಲ್ಲಿ ಮತ್ತೆ ಉಗ್ರ ಚಟುವಟಿಕೆಗಳು ಕಾಣಿಸಿಕೊಳ್ಳುತ್ತದೆ ಎಂದರು.

ಅಮೆರಿಕದ ಶ್ವೇತಭವನವು ಪತ್ರಿಕಾ ಪ್ರಕಟಣೆಯಲ್ಲಿ ಪಾಕಿಸ್ತಾನಕ್ಕೆ ಈ ಎಚ್ಚರಿಕೆಯನ್ನು ನೀಡಿದೆ. ಈ ಮೂಲಕ ಪಾಕಿಸ್ತಾನ ಮತ್ತೆ ತನ್ನ ಬಾಲ ಬಿಚ್ಚಿದಲ್ಲಿ ಭಾರತ ಅತ್ಯಂತ ಪರಿಣಾಮಕಾರಿ ಪ್ರತ್ಯುತ್ತರ ನೀಡೋದು ನಿಶ್ಚಿತ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ಅಮೆರಿಕ ರವಾನಿಸಿದೆ.

ಇನ್ನು ಉಗ್ರರ ನಿರ್ಮೂಲನೆಯನ್ನು ಪಾಕಿಸ್ತಾನ ಮಾಡಲಿದೆಯೇ ಎನ್ನುವುದಕ್ಕೆ ಈಗಲೇ ಅಂತಿಮ ತೀರ್ಮಾನಕ್ಕೆ ಬರುವುದು ಕಷ್ಟ ಎಂದು ಪ್ರಕಟಣೆ ಹೇಳಿದೆ.

Comments are closed.