ಕರಾವಳಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ ಆಯ್ಕೆ

Pinterest LinkedIn Tumblr

ಮಂಗಳೂರು : ವಿಶ್ವ ಮಟ್ಟದ ಬಂಟರ ಸಂಘಗಳ ಸದಸ್ಯತ್ವ ಹೊಂದಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಮುಂಬಾಯಿಯ ಕುರ್ಲಾ ಪೂರ್ವದ ಬಂಟರ ಸಂಘದ ಎನೆಕ್ಸ್ ಸಂಕೀರ್ಣದ ಸಭಾಂಗಣದಲ್ಲಿ ಒಕ್ಕೂಟದ ಆಡಳಿತ ಪದಾಧಿಕಾರಿಗಳು ಮತ್ತು ವಿಶ್ವ ಬಂಟ ಬಂಧುಗಳ ಸಮ್ಮುಖದಲ್ಲಿ ಜರಗಿತು.

2019 ರಿಂದ 2022ರವರೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ, ಕರ್ನಿರೆ ಫೌಂಡೇಶನ್‌ನ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಉಡುಪಿ ಬಂಟರ ಸಂಘದ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ, ಗೌ. ಕೋಶಾಧಿಕಾರಿಯಾಗಿ ಮುಂಬಯಿ ಬಂಟರ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್‌ದಾಸ್ ಶೆಟ್ಟಿ ಹಾಗೂ ಜೊತೆ ಕಾರ್ಯದರ್ಶಿಯಾಗಿ ದಕ್ಷಿಣ ಕನ್ನಡ ಬಂಟರ ಯಾನೆ ನಾಡವರ ಮಾತೃ ಸಂಘದ ಕಾಸರಗೋಡಿನ ಕಾರ್ಯಕಾರಿ ಸಮಿತಿಯ ಸದಸ್ಯ ಸತೀಶ್ ಅಡಪ ಸಂಕಬೈಲ್‌ರವರನ್ನು ಆಯ್ಕೆ ಮಾಡಲಾಯಿತು.

ನ್ಯಾಯವಾದಿ ಕೆ. ಪೃಥ್ವಿರಾಜ್ ರೈ ಚುನಾವಣಾಧಿಕಾರಿಯಾಗಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿದರು
ಸಭೆಯಲ್ಲಿ ಒಕ್ಕೂಟದ ಲೆಕ್ಕ ಪರಿಶೋಧಕ ಸಿ‌ಎ ದಯಾಶರಣ್ ಶೆಟ್ಟಿ, ಮುಂಬಯಿ , ಮಂಗಳೂರು , ಉಡುಪಿ, ಕಾಸರಗೋಡು ಹಾಗೂ ವಿದೇಶಗಳಿಂದ ವಿವಿಧ ಬಂಟರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.