ಕ್ರೀಡೆ

ಟಿ20 ಪಂದ್ಯ …ಸೂಪರ್ ಓವರ್‌ನಲ್ಲಿ ಲಂಕಾ ವಿರುದ್ಧ ರೋಚಕ ಗೆಲುವು ಸಾಧಿಸಿದ ಆಫ್ರಿಕಾ

Pinterest LinkedIn Tumblr

ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯ ಟೈನಲ್ಲಿ ಅಂತ್ಯಕೊಂಡಿದ್ದು ಸೂಪರ್ ಓವರ್‌ನಲ್ಲಿ ಆಫ್ರಿಕಾ ಲಂಕಾ ವಿರುದ್ಧ ರೋಚಕ ಗೆಲುವು ಸಾಧಿಸಿದೆ.

ಕೇಪ್ ಟೌನ್ ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಪೇರಿಸಿತ್ತು. 135 ರನ್ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ ಪೇರಿಸಲಷ್ಟೇ ಸಾಧ್ಯವಾಗಿದ್ದು ಇದರೊಂದಿಗೆ ಪಂದ್ಯದ ಟೈ ಆಗಿತ್ತು.

ನಂತರ ಸೂಪರ್ ಓವರ್ ನೀಡಲಾಗಿದ್ದು ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ 14 ರನ್ ಪೇರಿಸಿತ್ತು. 15 ರನ್ ಗುರಿ ಪಡೆದ ಶ್ರೀಲಂಕಾ ತಂಡ ಬ್ಯಾಟ್ಸ್ ಮನ್ ಗಳು ಇಮ್ರಾನ್ ತಾಹೀರ್ ಬೌಲಿಂಗ್ ಗೆ ತತ್ತರಿಸಿದ್ದು ಕೇವಲ 5 ರನ್ ಪೇರಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ ದಕ್ಷಿಣ ಆಫ್ರಿಕಾ 8 ರನ್ ಗಳಿಂದ ಗೆಲುವು ಸಾಧಿಸಿದೆ.

Comments are closed.