ಲಖನೌ: ಹಾಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಹೇಳುವ ಮೂಲಕ ಬಹುಜನ ಸಮಾಜವಾದಿ ಪಕ್ಷದ ಅಧಿನಾಯಕಿ ಮಾಯಾವತಿ ಹೊಸ ಶಾಕ್ ನೀಡಿದ್ದಾರೆ.
ಇಂದು ಲಖನೌ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಯಾವತಿ, ಹಾಲಿ ರಾಜಕೀಯ ಪರಿಸ್ಥಿತಿಯಲ್ಲಿ ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ವೈಯುಕ್ತಿಕ ಗೆಲುವಿಗಿಂತ ನಮ್ಮ ಮೈತ್ರಿಕೂಟದ ಗೆಲುವು ನನಗೆ ಮುಖ್ಯ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಬಿಜೆಪಿಯನ್ನು ಮಣಿಸುವುದೇ ನನ್ನ ಪ್ರಮುಖ ಗುರಿ ಎಂದು ಹೇಳಿರುವ ಮಾಯಾವತಿ, ನಾವು ಪ್ರಬಲ ಮೈತ್ರಿಕೂಟ ಹೊಂದಿದ್ದೇವೆ. ಆರ್ ಎಲ್ ಡಿ, ಎಸ್ ಪಿ ಪಕ್ಷಗಳೊಂದಿಗಿನ ನಮ್ಮ ಮೈತ್ರಿ ಬಿಜೆಪಿಯನ್ನು ಮಣಿಸಲು ಸಶಕ್ತವಾಗಿದೆ. ವೈಯುಕ್ತಿಕ ಗೆಲುವಿಗಿಂತ ಮೈತ್ರೀಕೂಟದ ಗೆಲುವೇ ತಮಗೆ ಮುಖ್ಯ. ಈ ಹಿಂದೆಯೇ ಕೂಡ ಬಿಜೆಪಿ ವಿರುದ್ಧ ಚಳವಳಿಯನ್ನು ಜೀವಂತವಾಗಿರಿಸಲು ರಾಜ್ಯಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಹಾಲಿ ರಾಜಕೀಯ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.
Comments are closed.