ಕ್ರೀಡೆ

RCB ತಂಡದ ನಾಯಕ ಕೊಹ್ಲಿ ವಿರುದ್ಧ ವ್ಯಂಗ್ಯವಾಡಿದ ಗಂಭೀರ್ ಹೇಳಿದ್ದೇನು…?

Pinterest LinkedIn Tumblr

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡವನ್ನು ಕಳೆದ ಏಳು-ಎಂಟು ವರ್ಷದಿಂದ ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದು ಆದರೆ ಆರ್ಸಿಬಿ ತಂಡದ ನಾಯಕನಾಗಿ ಒಮ್ಮೆಯೂ ಕಪ್ ಗೆದ್ದಿಲ್ಲ ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟೀಕಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ತಮ್ಮ ತಂಡವನ್ನು ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇವರಿಬ್ಬರಿಗೆ ಹೋಲಿಸಿದರೆ ಕೊಹ್ಲಿ ತಾಂತ್ರಿಕವಾಗಿ ಪ್ರಬಲ ನಾಯಕನಲ್ಲ ಎಂದು ಗಂಭೀರ್ ಹೇಳಿದ್ದಾರೆ.

ಒಮ್ಮೆಯೂ ತಂಡವನ್ನು ಗೆಲ್ಲಿಸಿದ ವಿರಾಟ್ ಕೊಹ್ಲಿಯನ್ನು ನಾಯಕರನ್ನಾಗಿ ಆರ್ಸಿಬಿ ಫ್ರಾಂಚೈಸಿ ಮುನ್ನಡೆಸುತ್ತಿರುವುದು ಅವರ ಅದೃಷ್ಟ. ಮ್ಯಾನೇಜ್ ಮೆಂಟ್ಗೆ ಕೊಹ್ಲಿ ಋಣಿಯಾಗಿರಬೇಕು ಎಂದು ಹೇಳಿದ್ದಾರೆ.

Comments are closed.