ಕರಾವಳಿ

ಕೊಲೆಸ್ಟ್ರಾಲ್ ಕಡಿಮೆ ಮಾಡಿ ಬಿ.ಪಿಯನ್ನು ಕಂಟ್ರೋಲ್ ತರಲು ರಾಗಿ ಅಂಬಲಿ ಉತ್ತಮ ಪರಿಹಾರ

Pinterest LinkedIn Tumblr

ಮೊದಲಿಗೆ ಹಳ್ಳಿಗಳಲ್ಲಿ ಮಾತ್ರ ಹೆಚ್ಚಾಗಿ ಉಪಯೋಗಿಸುತ್ತಿದ್ದ ರಾಗಿ ಮುದ್ದೆ, ರಾಗಿ ಹಂಬಲಿ ಮುಂತಾದ ರಾಗಿಯಿಂದ ಮಾಡುವ ಪದಾರ್ಥಗಳು, ಈಗ ನಗರಗಳಲ್ಲಿ ಕೂಡ ತುಂಬಾ ಫೇಮಸ್ ಆಗ್ತಾ ಇದೆ.ರಾಗಿ ತುಂಬಾ ಬಲಪಡಿಸುವ ಆಹಾರ ಇದು ನಮ್ಮ ದೇಹಕ್ಕೆ ಬೇಕಾದ ಶಕ್ತಿ ಹೆಚ್ಚಾಗಿ ನೀಡುವುದಲ್ಲದೆ ಕೊಬ್ಬನ್ನು ಸಹ ಕರಗಿಸುತ್ತದೆ ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಇದೆ.

ಮೂಳೆಗಳನ್ನು ಬಲಪಡಿಸುತ್ತದೆ
ರಾಗಿ ಹಂಬಲಿಯನ್ನು ಕುಡಿಯುವುದರಿಂದ ವಯಸ್ಸಾದವರಿಗೆ ಮೂಳೆಯನ್ನು ಬಲಪಡಿಸುತ್ತದೆ.ಆದ್ದರಿಂದ ಅವರು ರಾಗಿ ಅಂಬಲಿಯನ್ನು ತೆಗೆದುಕೊಳ್ಳುವುದರಿಂದ ಅದರಲ್ಲಿರುವ ಕ್ಯಾಲ್ಸಿಯಂ ಅವರ ಮೂಳೆಯನ್ನು ಬಲಪಡಿಸುತ್ತದೆ.

ಯೌವ್ವನವಾಗಿ ಕಾಣುವಂತೆ ಮಾಡುತ್ತದೆ
ರಾಗಿಯಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಾಗಿರುವುದರಿಂದ, ಇದು ಸಾಮಾನ್ಯವಾಗಿ ವಯಸ್ಸಾದವರಿಗೆ ಬರುವ ಲಕ್ಷಣಗಳನ್ನು ಕಡಿಮೆ ಮಾಡಿ ಸದಾ ಯೌವ್ವನವಾಗಿ ಕಾಣುವಂತೆ ಮಾಡುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ
ಹಿಗಂತೂ ನಗರದ ಜನರು ಸೇರಿದಂತೆ ಎಲ್ಲಾ ಕಡೆ ಈಗಿನ ಜೀವನ ಶೈಲಿಯಿಂದ ಸಕ್ಕರೆ ಕಾಯಿಲೆ ಹೆಚ್ಚಾಗಿದೆ. ಹೀಗಾಗಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಪ್ರತಿದಿನ ರಾಗಿಯಿಂದ ಮಾಡಿದ ಅಂಬಲಿ ಅಥವಾ ಮುದ್ದೆಯನ್ನು ತಿನ್ನುವುದರಿಂದ, ಇದು ರಕ್ತದಲ್ಲಿರುವ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಅಲ್ಲಿ ಇರುವಂತೆ ಮಾಡುತ್ತದೆ.

ನಾರ್ಮಲ್ ಬ್ಲಡ್ ಲೆವೆಲ್ಸ್
ರಾಗಿಯಲ್ಲಿ ಅನೇಕ ವಿಟಮಿನ್ ಮಾತು ಪ್ರೋಟೀನ್ ಗಳು ಅಡಗಿದ್ದು, ರಕ್ತ ಕಡಿಮೆ ಇರುವವರಿಗೆ ಇದು ಒಂದು ದಿವ್ಯ ಔಷಧಿ. ಯಾಕೆಂದರೆ ರಾಗಿಯಲ್ಲಿ ಐರನ್ ಶೇಕಡ ಹೆಚ್ಚಾಗಿರುತ್ತದೆ. ಆದ್ದರಿಂದ ರಾಗಿಯನ್ನು ರಾಗಿ ಅಂಬಲಿ ಅಥವಾ ಮುದ್ದೆ ಮುಖಾಂತರ ಪ್ರತಿದಿನ ಸೇವಿಸುವುದರಿಂದ ದೇಹಕ್ಕೆ ಬೇಕಾಗಿರುವ ಹಿಮೋಗ್ಲೋಬಿನ್ ಲೆವೆಲ್ ಅನ್ನು ಹೆಚ್ಚು ಮಾಡಿ ಒಳ್ಳೆಯ ಫಲಿತಾಂಶ ನೀಡುತ್ತದೆ.

ದೇಹದ ತೂಕವನ್ನು ಕಡಿಮೆ ಮಾಡುತ್ತದೆ
ಈಗಿನ ಜೀವನಶೈಲಿಯಿಂದ ಮನುಷ್ಯನ ದೇಹದ ತುಕದಲ್ಲಿ ತುಂಬಾ ಏರುಪೇರಾಗುತ್ತಿದೆ. ಕಾರಣ ಅವರು ತೆಗೆದುಕೊಳ್ಳುವ ಆಹಾರ.ಅದರಲ್ಲೂ ದೇಹದ ಅತೀ ಹೆಚ್ಚು ತುಕದಿಂದಾಗಿ ಜನ ತೂಕವನ್ನು ಕಡಿಮೆ ಮಾಡಿಕೊಳ್ಳಲು ಮಾಡಬಾರದ ಕಸರತ್ತುಗಳೆನ್ನೆಲ್ಲಾ ಮಾಡುತ್ತಾರೆ.ಆದರೆ ಮನೆಯಲ್ಲಿ ಇದ್ದುಕೊಂಡೇ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಪ್ರತಿದಿನ ರಾಗಿಯ ಅಂಬಲಿಯನ್ನು ತೆಗೆದುಕೊಳ್ಳುವುದರಿಂದ ಅವರ ಹೊಟ್ಟೆಯ ಹಸಿವನ್ನು ಕಡಿಮೆ ಮಾಡಿ ತೂಕವನ್ನು ಕಡಿಮೆ ಆಗಲು ಸಹಾಯ ಮಾಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಜೀವನಶೈಲಿ ಮತ್ತು ಆಹಾರದ ಕ್ರಮ ಮತ್ತು ಕೆಲಸದ ಒತ್ತಡದಿಂದ ಹಲವರಲ್ಲಿ ಬಿ.ಪಿ ಹೆಚ್ಚಾಗುತ್ತಿದೆ.ರಾಗಿ ಹಂಬಲಿಯನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಬಿ.ಪಿಯನ್ನು ಕಂಟ್ರೋಲ್ ಅಲ್ಲಿ ಇಡುತ್ತದೆ.

ಜೀವಸತ್ವ ಕೊರತೆಯನ್ನು ಕಡಿಮೆ ಮಾಡುತ್ತದೆ
ನಮ್ಮ ಇಂದಿನ ಆಹಾರದ ಕ್ರಮದಿಂದಾಗಿ ಮಕ್ಕಳಿಗೆ ಸರಿಯಾದ ವಿಟಮಿನ್ ಪ್ರೋಟೀನ್ ಗಳಿರುವ ಆಹಾರ ಸಿಗುತ್ತಿಲ್ಲ.ಅಂತಹ ಮಕ್ಕಳು ಜೀವಸತ್ವಗಳ ಕೊರತೆಯಿಂದ ನರಳಬೇಕಾಗುತ್ತದೆ. ಆದರೆ ಚಿಕ್ಕ ಮಕ್ಕಳಿಗೆ ಅಧಿಕವಾಗಿ ಬರುವ ಪೌಷ್ಟಿಕ ಆಹಾರದ ಕೊರತೆಯನ್ನು ರಾಗಿಯಿಂದ ದೂರ ಮಾಡಿಕೊಳ್ಳಬಹುದು.

ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ
ಸಿಕ್ಕ ಸಿಕ್ಕ ಶಾಂಪು ಮತ್ತು ಸೋಪುಗಳನ್ನು ತಲೆ ಕೂದಲಿಗೆ ಉಪಯೋಗಿಸುವುದರಿಂದ ಕೂದಲು ಉದುರುವುದು ಸಾಮಾನ್ಯಾವಾಗಿ ಬಿಟ್ಟಿದೆ.ಹಾಗಾಗಿ ರಾಗಿ ಯಲ್ಲಿರುವ ಅಮಿನ್ ಅಮ್ಲ, ಕೂದಲು ಉದುರುವುದನ್ನು ಕಡಿಮೆ ಮಾಡಿ. ಕೂದಲು ಬೆಳೆಯಲು ಸಹಾಯ ಮಾಡುತ್ತದೆ.ರಾಗಿ ಹಂಬಲಿ ಅಥವಾ ರಾಗಿ ಮುದ್ದೆಯ ಮುಖಾಂತರ ದೇಹಕ್ಕೆ ಸೇರಿಸಬಹುದು.

ರಾಗಿ ಅಂಬಲಿ ಮಾಡುವ ವಿಧಾನ
ಸಾಮಾನ್ಯವಾಗಿ ಹಳ್ಳಿ ಜನರಿಗೆ ರಾಗಿಯಿಂದ ಮಾಡುವ ಪದಾರ್ಥಗಳಾದ ರಾಗಿ ಮುದ್ದೆ, ರಾಗಿ ಹಂಬಲಿ ಮುಂತಾದ ಪದಾರ್ಥಗಳನ್ನು ಮಾಡುವು ಬಗೆ ಗೊತ್ತಿರುತ್ತದೆ. ಆದ್ರೆ ನಗರದ ಜನರಿಗೆ ಇದು ಹೇಗೆ ಮಾಡುವುದೆಂದು ಗೊತ್ತಿರುವುದಿಲ್ಲ. ಅಂತವರು ರಾಗಿ ಹಂಬಲಿಯನ್ನು ಮಾಡುವುದು ಹೇಗೆಂದು ಮುಂದೆ ನೋಡಿ ತಿಳಿಯಿರಿ…

ಬೇಕಾಗುವ ಪದಾರ್ಥಗಳು
ರಾಗಿ ಹಿಟ್ಟು 1/2 ಕಪ್, ಕತ್ತರಿಸಿದ ಈರುಳ್ಳಿ 1/2 ಕಪ್, ಕತ್ತರಿಸಿದ ಹಸಿ ಮೆಣಸಿನಕಾಯಿ 1 ಸ್ಪೂನ್,ಕತ್ತರಿಸಿದ ಕೊತ್ತಂಬರಿ ಸೊಪ್ಪು 2 ಸ್ಪೂನ್
ಉಪ್ಪು ರುಚಿಗೆ ಬೇಕಾದಷ್ಟು, ಜೀರಿಗೆ ಪುಡಿ 1 ಸ್ಪೂನ್, ಕರಿಬೇವು 6 ಎಲೆಗಳು, ಮಜ್ಜಿಗೆ 2 ಕಪ್, ನಿಂಬೆಹಣ್ಣು 1,ನೀರು 1/3 ಲೀಟರ್

ಮಾಡುವ ವಿಧಾನ
ಒಂದು ಕಪ್ ನೀರಿನಲ್ಲಿ 1/2 ಕಪ್ ರಾಗಿ ಹಿಟ್ಟನ್ನು ಉಂಡೆ ಇಲ್ಲದೆ ಬೆರೆಸಿ ಪಕ್ಕದಲ್ಲಿ ಇಟ್ಟುಕೊಳ್ಳಿ. ನಂತರ 1/2 ಲೀಟರ್ ನೀರನ್ನು ಕುದಿಸಿ ಅದರಲ್ಲಿ ನಾವು ಮೊದಲು ತಯಾರಿ ಮಾಡಿಕೊಂಡ ಮಿಶ್ರಣವನ್ನು ಇದರಲ್ಲಿ ಹಾಕಿ. 7 ನಿಮಿಷಗಳ ಕಾಲ ಚೆನ್ನಾಗಿ ಉಂಡೆ ಬಾರದಂತೆ ಕುದಿಸಿರಿ. ನಂತರ ಅದು ತಣ್ಣಗಾದ ಮೇಲೆ ಅದಕ್ಕೆ ಮಜ್ಜಿಗೆ, ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ರುಚಿಗೆ ಬೇಕಾದಷ್ಟು ಉಪ್ಪು, ಅದರಲ್ಲಿ ಹಾಕಿ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಬೆರೆಸಿರಿ.

Comments are closed.