ಕರಾವಳಿ

ಚರ್ಮದ ಆರೈಕೆಗಾಗಿ ತೆಂಗಿನ ಎಣ್ಣೆಯ ಪಾತ್ರ ತಿಳಿಯಬೇಕೆ..?

Pinterest LinkedIn Tumblr

ತೆಂಗಿನ ಎಣ್ಣೆಯ ಪ್ರಯೋಜನಗಳು- ವಿವಿಧ ಪ್ರಯೋಜನಕಾರಿ ಗುಣಲಕ್ಷಣಗಳಿಂದಾಗಿ, ಹಲವಾರು ತ್ವಚೆ ಲೇಪನಗಳಲ್ಲಿ ಪ್ರಮುಖ ಅಂಶವಾಗಿ ಬಳಸಲಾಗುತ್ತದೆ. ತೆಂಗಿನ ಎಣ್ಣೆ ಪ್ರಪಂಚದಾದ್ಯಂತ ತಿನ್ನಬಹುದಾದ ಎಣ್ಣೆ ,ಕೂದಲಿನ ಪೋಷಣೆ ಅಲ್ಲದೆ ಅತ್ಯುತ್ತಮ ಮಸಾಜ್ ಎಣ್ಣೆ ಮತ್ತು ಚರ್ಮದ ಒಂದು ಸುಗಂಧಕಾರಕವಾಗಿಯೂ ಪ್ರಸಿದ್ಧವಾಗಿದೆ. ವಿಶ್ವದ ಉಷ್ಣವಲಯದ ಭಾಗಗಳಲ್ಲಿ, ಸ್ಥಳೀಯರು ಚರ್ಮಕ್ಕಾಗಿ ತೆಂಗಿನ ಎಣ್ಣೆಯನ್ನು ಬಳಸುತ್ತಾರೆ, ಏಕೆಂದರೆ ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಯಾವುದೇ ನೈಸರ್ಗಿಕ ತೈಲ, ಯಾವುದೇ ರಾಸಾಯನಿಕ ಅಥವಾ ಸೇರ್ಪಡೆಗಳಿಲ್ಲದೆ, ಬಿಸಿಲಿನ ಸ್ಥಳಗಳಲ್ಲಿ ಚರ್ಮವನ್ನು ರಕ್ಷಿಸುತ್ತದೆ. ತೆಂಗಿನ ಎಣ್ಣೆಯ ಅತ್ಯುತ್ತಮ ಅಂಶವೆಂದರೆ ಇದು ತ್ವಚೆಗೆ ಅನುಕೂಲಕರವಾಗಿದೆ.ಚರ್ಮದ ಆರೈಕೆಗಾಗಿ ತೆಂಗಿನ ಎಣ್ಣೆಯ ಉಪಯೋಗ ಅಧಿಕ. ಬನ್ನಿ ಈಗ ತೆಂಗಿನ ಎಣ್ಣೆಯ ಪ್ರಯೋಜನಗಳು ಯಾವುವು ಎಂದು ನೋಡೋಣ .

ತೆಂಗಿನ ಎಣ್ಣೆಯ ಪ್ರಯೋಜನಗಳು
ತೆಂಗಿನ ಎಣ್ಣೆಯನ್ನು ಚರ್ಮದ ಆರೈಕೆಗಾಗಿ ಈ ಕೆಳಗಿನ ವಿಧಾನಗಳಲ್ಲಿ ಬಳಸಬಹುದು

ತುಟಿಗಳ ಬಿರುಕು ಹೋಗಿಸಲು
ನಮ್ಮ ತುಟಿಗಳ ಬಿರುಕುಗಳು ಕೆಲವೊಮ್ಮೆ ಚಿಂತೆ, ಅಸ್ವಸ್ಥತೆ, ಮತ್ತು ಮುಜುಗರಕ್ಕೀಡಾಗುವಂತೆ ಮಾಡುತ್ತದೆ. ತುಟಿಗಳಲ್ಲಿ ರಾಸಾಯನಿಕ ಲೇಪನಗಳನ್ನು ಅನ್ವಯಿಸುವುದು ವಿಷಯುಕ್ತ ಲೇಪನ ಬಳಸಿದಂತೆ, ಅದು ಅಷ್ಟು ಒಳಿತಲ್ಲ. ತೆಂಗಿನ ಎಣ್ಣೆಯು ಅಂತಹ ಸಂದರ್ಭಗಳಲ್ಲಿ ಪರ್ಯಾಯ ಆಯ್ಕೆಯಾಗಿದೆ. ಇದು ತ್ವರಿತವಾಗಿ ಕಾರ್ಯನಿರ್ವಹಿಸುತ್ತದೆ, ಅದು ನಮ್ಮ ಹೊಟ್ಟೆ ಸೇರಿದರೂ ನಮಗೆ ಹೆಚ್ಚುವರಿ ಪ್ರಯೋಜನಗಳನ್ನು ಮಾತ್ರ ನೀಡುತ್ತದೆ, ದುಷ್ಪರಿಣಾಮಗಳನ್ನಲ್ಲ. ನಮ್ಮ ತುಟಿಗಳ ಆರೈಕೆ ತೆಂಗಿನ ಎಣ್ಣೆಯ ಪ್ರಯೋಜನಗಳು ಉತ್ತಮವಾದುದಾಗಿದೆ.

ಚರ್ಮದ ಆರೈಕೆ
ತೆಂಗಿನ ಎಣ್ಣೆ ಒಣ ಮತ್ತು ಕಠಿಣ ಚರ್ಮದ ಪರಿಸ್ಥಿತಿಗಳಿಂದ ದೂರವಿರಲು ನಮಗೆ ಸಹಾಯ ಮಾಡುತ್ತದೆ. ನಮ್ಮ ಪಾದದ ಬಿರುಕುಗಳು ಯಾವುದೇ ಲೇಪನದಿಂದ ಕಣ್ಮರೆಯಾಗದಿದ್ದರೆ, ಪೀಡಿತ ಪ್ರದೇಶಕ್ಕೆ ತೆಂಗಿನ ಎಣ್ಣೆಯನ್ನು ಅರ್ಪಿಸಿದರೆ ನಮ್ಮ ಪಾದಗಳು ದಿನಗಳಲ್ಲಿ ಮೃದುವಾಗುತ್ತವೆ.ಇದರ ಬಳಕೆಯಿಂದ ಚರ್ಮದ ಕಿರಿಕಿರಿ ಉಂಟಾಗದಂತೆ ಸತ್ತ ಚರ್ಮವನ್ನು ತೆಗೆದುಹಾಕಿ ಸುಂದರ ಚರ್ಮ ಪಡೆಯಲು ಸಾಧ್ಯವಾಗುತ್ತದೆ.

ಮೇಕಪ್ ಹೋಗಲಾಡಿಸಬಹುದು
ತೆಂಗಿನ ಎಣ್ಣೆಯನ್ನು ಮೇಕಪ್ ಹೋಗಲಾಡಿಸುವ ಸಾಧನವಾಗಿ ಬಳಸಬಹುದು. ಇದು ಸಾಮಾನ್ಯವಲ್ಲ, ಆದರೆ ಪ್ರಪಂಚದಾದ್ಯಂತದ ಮಹಿಳೆಯರು ಮೇಕಪ್ ಗಳನ್ನು ಕಠಿಣವಾದ ಅಥವಾ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವೇಶಿಸುವ ಕಠಿಣ ರಾಸಾಯನಿಕಗಳನ್ನು ಹೋಗಿಸಲು ಇಂದಿಗೂ ಇದೆ ಎಣ್ಣೆಯನ್ನು ಬಳಸುತ್ತಿದ್ದಾರೆ . ಅವರ ಮೇಕಪ್ ತೆಗೆದುಹಾಕುವುದಕ್ಕೆ ಬಳಸಿಕೊಂಡಿದ್ದಾರೆ. ತೆಂಗಿನ ಎಣ್ಣೆಯ ಪ್ರಯೋಜನಗಳು ತಿಳಿದು ಕೊಂಡರಲ್ಲವೇ ಆಗಾದರೆ ನೀವೊಮ್ಮೆ ಪ್ರಯತ್ನಿಸಿ…

Comments are closed.