ಕರಾವಳಿ

ಅಡುಗೆ ಸೋಡಾ ಜೊತೆಗೆ ನೀರು ಸೇರಿಸಿ ಸೇವಿಸಿದರೆ ಕೀಲು ನೋವು,ಸಂಧಿವಾತ ಸಮಸ್ಯೆ ನಿವಾರಣೆ

Pinterest LinkedIn Tumblr

ಆಯುರ್ವೇದದ ಪ್ರಕಾರ ಅಡುಗೆ ಸೋಡಾ ಹಲವಾರು ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ ಮಾನವನ ಆರೋಗ್ಯ ದೃಷ್ಟಿಯಲ್ಲಿ ಅಡುಗೆ ಸೋಡಾ ಜೊತೆಯಲ್ಲಿ ನೀರು ಸೇರಿಸಿ ಕುಡಿದರೆ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ..

1 ದೇಹದಲ್ಲಿ ಆಮ್ಲವನ್ನು ಸಮತೋಲನ ಮಾಡುತ್ತದೆ: ಮನುಷ್ಯನ ದೇಹದಲ್ಲಿ ಆಹಾರ ಸರಿಯಾಗಿ ಜೀರ್ಣವಾಗಲು ಆಮ್ಲದ ಅಗತ್ಯವಿದೆ. ದೇಹದಲ್ಲಿ ಆಮ್ಲದ ಅಂಶ ಹೆಚ್ಚಾದರೆ ಸಂಧಿವಾತ ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ನಂತಹ ರೋಗಗಳನ್ನು ಉಂಟು ಮಾಡುತ್ತದೆ. ಬೇಯಿಸುವ ಸೋಡಾ ನೀರು ಮನುಷ್ಯನ ದೇಹದಲ್ಲಿ ಆಮ್ಲದ ಅಂಶ ಹೆಚ್ಚಾಗದಂತೆ ತಡೆಯುತ್ತದೆ. ಹಾಗೂ ಸಮತೋಲನ ಕಾಪಾಡುತ್ತದೆ.

2 ಆಂಟಿ ಆಸಿಡ್ ಆಗಿ ಕಾರ್ಯನಿರ್ವಹಿಸುತ್ತದೆ :ಒಂದಷ್ಟು ಬಾರಿ ಮನುಷ್ಯರಲ್ಲಿ ಆಹಾರ ಸಮಸ್ಯೆಯಿಂದ ತಮ್ಮ ಎದೆಯ ಬಾಗ ಹಾಗೂ ಹೊಟ್ಟೆಯ ಭಾಗದಲ್ಲಿ ಉರಿ ಉಂಟಾಗುತ್ತದೆ. ನೀರಿನ ಜೊತೆಗೆ ಸೋಡಾವನ್ನು ಬೆರೆಸಿ ಕುಡಿದರೆ ಅತಿಯಾದ ಹೈಡ್ರೋಕ್ಲೋರಿಕ್ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಹಾಗೂ ಸಮಾಧಾನ ದೊರೆಯುತ್ತದೆ.

3 ಕೀಲು ನೋವು: ಸೋಡಾ ಜೊತೆಗೆ ನೀರನ್ನು ಸೇರಿಸಿ ಸೇವಿಸಿದರೆ ಕೀಲು ನೋವಿನ ಸಂಧಿವಾತ ಸಮಸ್ಯೆಯನ್ನು ತಡೆಯುತ್ತದೆ.

4 ಕರುಳಿನ ಶುದ್ಧೀಕರಣ: ಮಾನವನ ಕರುಳಿನ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಹೊಟ್ಟೆ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಹಾಗೆ ಜೀರ್ಣಕ್ರಿಯೆಗೆ ಇದು ರಾಮಬಾಣವಾಗಿದೆ.

5 ಮೂತ್ರಪಿಂಡದ ಕಲ್ಲುಗಳು : ಮಾನವನ ದೇಹದಲ್ಲಿ ಮೂತ್ರಪಿಂಡದ ಕಲ್ಲುಗಳು ಬೆಳವಣಿಗೆಗೆ ಕಬ್ಬಿಣಾಂಶದ ಕೊರತೆ ದೇಹದ ಅತಿಯಾದ ಆಮ್ಲ ನಿರ್ಜಲೀಕರಣ ಕೂಡ ಕಾರಣವಾಗಬಹುದು ಅಡುಗೆ ಸೋಡಾ ನೀರನ್ನು ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ದೇಹದ ph ಮಟ್ಟವನ್ನು ಕಡಿಮೆ ಮಾಡುತ್ತದೆ.

6 ಅಜೀರ್ಣ ಸಮಸ್ಯೆ: ಎಲ್ಲರಿಗೂ ತಿಳಿದಿರುವ ಹಾಗೆ ಅಡುಗೆ ಸೋಡಾ ಬೆರೆಸಿದ ನೀರನ್ನು ಸೇವಿಸಿದರೆ ವಯಸ್ಕರಿಗೆ ಅಜೀರ್ಣ ತೊಂದರೆ ಉಂಟಾಗುವ ತೊಂದರೆಗಳು ಕಡಿಮೆಯಾಗುತ್ತವೆ ಹಾಗೂ ತಿಂದ ಆಹಾರವನ್ನು ಜೀರ್ಣ ಮಾಡಲು ಸಹಾಯ ಮಾಡುತ್ತದೆ.

Comments are closed.