ಕರಾವಳಿ

ಜಿಲೆಟಿನ್ ಕಡ್ಡಿ ಸಹಿತ ಅಪಾರ ಪ್ರಮಾಣದ ಸ್ಪೋಟಕ ಪತ್ತೆ : ಎಎಸ್ಪಿ ನೇತೃತ್ವದಲ್ಲಿ ಅತಿಕ್ರಮ ಗಣಿ ಮೇಲೆ ದಾಳಿ

Pinterest LinkedIn Tumblr

ಉಡುಪಿ: ಶಂಕರನಾರಾಯಣ ಹಾಗೂ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸ್ಪೋಟಕ ಹಾಗೂ ಕೆಂಪುಕಲ್ಲು, ಕಾರ್ಮಿಕರ ವಶಕ್ಕೆ ಪಡೆಯಲಾಗಿದೆ. ಕೆಂಪುಕಲ್ಲು ಕ್ವಾರಿ ಮೂವರು ಪಾರ್ಟನರ್ ಶಿಪ್‌ನಲ್ಲಿ ನಿರ್ವಹಿಸುತ್ತಿದ್ದು, ಒಬ್ಬರ ವಶಕ್ಕೆ ಪಡೆಯಲಾಗಿದೆ.

ಖಚಿತ ಮಾಹಿತಿ ಮೇರೆಗೆ ಬೆಳ್ವೆ ಗ್ರಾಮ ಸೂರ್ಗೋಳಿ ಬಳಿ ಸರ್ಕಾರಿ ಜಾಗದಲ್ಲಿ ಕೆಂಪುಕಲ್ಲು ಗಣಿ ಮೇಲೆ ದಾಲಿಸಿದ ಪೊಲೀಸ್ ತಂಡ ಯಂತ್ರ, ಲಾರಿ, ಕೆಂಪುಕಲ್ಲು ಹಾಗೂ ಕಾರ್ಮಿಕರ ವಶಕ್ಕೆ ಪಡೆದಿದ್ದಾರೆ. ಪೊಲೀಸ್ ರೈಡ್ ಸಮಯ ಕೆಂಪುಕಲ್ಲು ಯಂತ್ರಗಳ ಮೂಲಕ ಕಾರ್ಮಿಕರು ಕಲ್ಲು ಕಡಿಯುತ್ತಿದ್ದರು. ಪೊಲೀಸರ ಕಾರ್ಮಿಕರ ಹಾಗೂ ಕಲ್ಲು ಕೊರೆಯುವ ಯಂತ್ರ ಹಾಗೂ ಇನ್ನಿತರ ಪರಿಕರಗಳ ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಟ ಠಾಣೆ ವ್ಯಾಪ್ತಿ ನೆಂಚಾರು ಬಳಿ ನಡೆಯುತ್ತಿದ್ದ ಶಿಲೆಕಲ್ಲು ಕೋರೆ ಮೇಲೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸ್ಪೋಟಕ ಹಾಗೂ ಸ್ಪೋಟಕ್ಕೆ ಬಳೆಸುವ ಜೆಲಿಟಿನ್ ಕಟ್ಟಿ ವಶಕ್ಕೆ ಪಡೆದುಕೊಂಡಿದ್ದಾರೆ. ಕಲ್ಲು ಕೋರೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕ್ವಾರಿಗೆ ಪರವಾನಿಗೆ ಇದೆ ಎಂದು ಗಣಿ ನಡೆಸುವವರು ವಾದಿಸಿದ್ದು, ಪರವಾನಿಗೆ ಇಲ್ಲದೆ ನಡೆಯುತ್ತಿದೆ ಎಂದು ನಂತರ ಗೊತ್ತಾಗಿದೆ. ಸ್ಪೋಟಕ ವಶಕ್ಕೆ ಪಡೆದುಕೊಳ್ಳಲಾಗಿದೆ.

32 ಜಿಲಿಟಿನ್ ಕಡ್ಡಿ, ಸಹಿತ ಇನ್ನಿತರ ಸ್ಪೋಟಕ ವಸ್ತುಗಳ ವಶಕ್ಕೆ ಪಡೆಯಲಾಗಿದೆ. ದಾಳಿ ಸಂದರ್ಭ ಸ್ಪೋಟಕ್ಕೆ ಪರಾನಿಗೆ ಇಲ್ಲದೆ ಯಾವ ಮುಂಜಾಗರೂಕತೆ ಇಲ್ಲದೆ ಸ್ಪೋಟ ತಜ್ಞರ ನೆರವೂ ಇಲ್ಲದೆ ಶಿಲೆಕಲ್ಲು ಸ್ಪೋಟ ಮಾಡುತ್ತಿದ್ದು, ಸ್ಪೋಟಕ್ಕೂ ಪರವಾನಿಗೆ ಇಲ್ಲ ಎನ್ನೋದು ನಂತರ ಗೊತ್ತಾಗಿದೆ. ಶಂಕರನಾರಾಯಣ ಹಾಗೂ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.