ಕರಾವಳಿ

ಊಟದ ಬಳಿಕ ತಕ್ಷಣ ನೀವು ಟೀ ಕುಡಿಯುತ್ತೀರಾ! ಹಾಗಾದ್ರೆ ಇದನ್ನ ಓದಿ…

Pinterest LinkedIn Tumblr

ಒಂದು ಲೋಟ ಟೀ ಕುಡಿದರೆ ಸಾಕು, ನನ್ನ ತಲೆ ನೋವೆಲ್ಲ ಮಂಗ ಮಾಯವಾಗುತ್ತೆ ಅಂತ ಎಷ್ಟೋ ಜನ ಹೇಳುತ್ತಿರುತ್ತಾರೆ.ಕೆಲವರು ಹಾಸಿಗೆಯಿಂದ ಬೆಳಿಗ್ಗೆ ಏಳುತ್ತಿದ್ದ ಹಾಗೆ ಬಿಸಿ ಬಿಸಿ ಟೀ ಕುಡಿಯುತ್ತಾರೆ.ಕೆಲವರು ತುಂಬಾ ಸುಸ್ತಾದಾಗ ಟೀ ಕುಡಿಯುತ್ತಾರೆ.ಇನ್ನೂ ಕೆಲವರು ದಿನಕ್ಕೆ ಮೂರ್ನಾಲ್ಕು ಬಾರಿ, ನಾಲ್ಕೈದು ಬಾರಿ ಚಹಾ ಸೇವನೆ ಮಾಡುವವರಿದ್ದಾರೆ.ಕೆಲವರಿಗಂತೂ ಊಟ ಅಥ್ವಾ ತಿಂಡಿ ಆದ ನಂತರ ಟೀ ಬೇಕೇಬೇಕು.ನೀವೂ ಇದೇ ರೀತಿ ಇದ್ದರೆ ಈ ಮಾಹಿತಿಯನ್ನು ತಪ್ಪದೆ ಓದಿ..

ಅನೇಕರಿಗೆ ಊಟ ಆದ ತಕ್ಷಣ ಟೀ ಕುಡಿಯುವ ಅಭ್ಯಾಸವಿದೆ.ಅದರಲ್ಲೂ ಚಳಿಗಾಲದಲ್ಲಿ ಹಲವಾರು ಜನರ ಈ ಅಭ್ಯಾಸಕ್ಕೆ ಹೊಂದಿಕೊಳ್ಳುವರಿದ್ದಾರೆ.ಆದ್ರೆ ಊಟ ತಿಂದ ನಂತರ ತಕ್ಷಣ ಟೀ ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಎಲೆಗಳಲ್ಲಿ ಎಸಿಡಿಟಿ ಗುಣವಿರುತ್ತದೆ. ಆಹಾರ ನಂತ್ರ ಟೀ ಸೇವನೆ ಮಾಡುವುದ್ರಿಂದ ಪ್ರೋಟೀನ್ ಅಂಶ ನಾಶವಾಗಿ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

ಕೆಲವೊಂದು ಕಾರಣಗಳಿಂದ ಟೀನಲ್ಲಿರುವ ಕೆಫೀನ್ ಅಂಶ ರಕ್ತದೊತ್ತಡವನ್ನು ಹೆಚ್ಚು ಮಾಡುತ್ತದೆ.ಇದರ ಜೊತೆಗೆ ಕಾರ್ಟಿಸೋಲ್ ಎಂಬ ಅಂಶವನ್ನು ಬಿಡುಗಡೆ ಮಾಡುವುದರಿಂದ ನಮ್ಮ ದೇಹದ ಹಲವಾರು ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ.ನಮ್ಮ ದೇಹದ ತೂಕ ಹೆಚ್ಚಾಗುವುದರ ಜೊತೆಗೆ ಮಧುಮೇಹ ಸೇರಿದಂತೆ ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳು ಬರುತ್ತವೆ.

ಊಟ ಆದ ನಂತರ ಚಹಾದಲ್ಲಿರುವ ಪಾಲಿಫಿನಾಲ್ ಮತ್ತು ಟ್ಯಾನಿನ್ ಅಂಶಗಳು ನಾವು ತಿನ್ನುವ ಆಹಾರದಲ್ಲಿನ ಕೊಬ್ಬನ್ನು ಹೀರಿಕೊಳ್ಳಲು ಬಿಡುವುದಿಲ್ಲ.ಒಂದು ವೇಳೆ ಕಬ್ಬಿಣದ ಅಂಶ ಇರುವ ಸ್ತ್ರೀಯರು ಊಟ ಆದ ನಂತರ ಟೀ ಕುಡಿಯಲೆಬಾರದು. ಒಂದು ವೇಳೆ ಊಟ ಆದ ನಂತರ ಟೀ ಕುಡಿಯಲೇಬೇಕು, ಕುಡಿಯದೆ ಇರೋದು ಆಗೋದಿಲ್ಲ ಎಂದಾದರೆ ಒಂದು ಗಂಟೆಯ ನಂತ್ರ ಟೀ ಕುಡಿಯಬಹುದು.

Comments are closed.