ಕರಾವಳಿ

ಗಂಧ ಸಾಗಾಟ ಆರೋಪ: ಮೂವರನ್ನು ದೋಷಮುಕ್ತಗೊಳಿಸಿ‌ ನ್ಯಾಯಾಲಯದ ಆದೇಶ

Pinterest LinkedIn Tumblr

ಕುಂದಾಪುರ: ಯಡ್ತಾಡಿ ಗ್ರಾಮದ ಮೀಸಲು ಅರಣ್ಯ ಪ್ರದೇಶದಿಂದ ಶ್ರೀ ಗಂಧದ ಕೊರಡನ್ನು ಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾರೆ ಎನ್ನುವ ಆರೋಪದಲ್ಲಿ  ಸಿಕ್ಕಿ ಬಿದ್ದಿದ್ದ ಸೀತಾರಾಮ, ಚಂದ್ರ ಹಾಗೂ ಬ್ರಹ್ಮಾವರ ರಂಗನಕೆರೆಯ ಅಬ್ದುಲ್ ಎನ್ನುವವರನ್ನು ದೋಷಮುಕ್ತಗೊಳಿಸಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಆರೋಪಿಗಳ ವಿರುದ್ಧ ಭಾರತೀಯ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಖಂಡೇರಿ ಅವರು, ಸಾಕ್ಷ್ಯಾಧಾರ ಕೊರತೆಯಿಂದ ದೋಷಮುಕ್ತಿಗೊಳಿಸಿರುವುದಾಗಿ ತೀರ್ಪು ನೀಡಿದ್ದಾರೆ.

ಆರೋಪಿಗಳ ಪರ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದರು.

Comments are closed.