ಕರಾವಳಿ

ಜಿಲ್ಲೆಯಲ್ಲಿ ಈ ಬಾರಿ ಅತೀ ಹೆಚ್ಚು ಮತದಾನಕ್ಕಾಗಿ ಸ್ವೀಪ್ ಸಮಿತಿಯಿಂದ “ಮತದಾನ ಜಾಗೃತಿ ಕಾರ್ಯಕ್ರಮ”

Pinterest LinkedIn Tumblr

ಮಂಗಳೂರು ಮಾರ್ಚ್ 16: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಶೇಕಡ ಮತದಾನವಾಗಬೇಕೆಂಬ ಉದ್ದೇಶದಿಂದ ಜಿಲ್ಲಾಡಳಿತದ ವತಿಯಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.

ಈ ನಿಟ್ಟಿನಲ್ಲಿ ಜಿಲ್ಲೆಯ ಸ್ವೀಪ್ ಸಮಿತಿಯು ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜನರಿಗೆ ಮತದಾನದ ಮಹತ್ವ ಸಾರುಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೆಲ್ವಮಣಿ ತಿಳಿಸಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಸ್ವೀಪ್ ಸಮಿತಿ ವತಿಯಿಂದ ಗಾಳಿಪಟ ಉತ್ಸವ, ಮರಳು ಶಿಲ್ಪ , ಹದಿನೆಂಟು ಕಿಲೋಮೀಟರ್ ನ ವಾಕಥನ್, ಸೈಕ್ಲೋಥಾನ್ ನಡೆಸಿ ಮತದಾನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.

ಈ ಬಾರಿ ಪಿಂಕ್ ಬೂತ್, ಎತ್ನಿಕ್ ಬೂತ್, ಟ್ರೈಬಲ್ ಪ್ರೆಂಡ್ ಬೂತ್ ಜೊತೆಗೆ ಸೀನಿಯರ್ ಸಿಟಿಜನ್ ಪ್ರೆಂಡ್ಲಿ ಬೂತ್ ತೆರೆಯಲು ಯೋಜನೆ ಸಿದ್ದ ಪಡಿಸಲಾಗಿದೆ. ಜೊತೆಗೆ ನಗರದ ಮಾಲ್‌ಗಳಲ್ಲಿ ಡೆಮೋ ಮತಚಲಾವಣೆ ಮಾಡಿಸುವ ಯೋಜನೆಯಿದ್ದು ಈಗಾಗಲೆ ಜಿಲ್ಲೆಯ ವಿವಿಧೆಡೆ ಎರಡು ಲಕ್ಷ ಮಂದಿಗೆ ಮತದಾನ ಚಲಾವಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ ಎಂದು ಸಿ ಇ ಓ ಸೆಲ್ವಮಣಿ ಮಾಹಿತಿ ನೀಡಿದ್ದಾರೆ.

Comments are closed.