ಕರಾವಳಿ

ದೇಹಕ್ಕೆ ಅಧಿಕ ಪೌಷ್ಟಿಕಾಂಶವನ್ನು ಒದಗಿಸಿ, ದೇಹದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಇದು ಸಹಕಾರಿ.

Pinterest LinkedIn Tumblr

ನೆನೆಸಿಟ್ಟ ಖರ್ಜೂರವನ್ನು ತಿನ್ನುವುದರಿಂದ ಸಿಗುವ ಪ್ರಯೋಜನಗಳು ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ. ಇದು ತುಂಬಾ ಔಷಧೀಯ ಗುಣಗಳನ್ನು ಹೊಂದಿದ್ದು ತುಂಬಾ ರುಚಿಕರವಾಗಿಯು ಇರುತ್ತದೆ. ಇದು ನಮ್ಮ ದೇಹಕ್ಕೆ ಪೌಷ್ಟಿಕಾಂಶವನ್ನು ಒದಗಿಸಿ ನಮ್ಮ ದೇಹದ ಸೌಂದರ್ಯವನ್ನು ಸಹ ಹೆಚ್ಚಿಸುತ್ತದೆ.

ಒಂದು ಗಾಜಿನ ಡಬ್ಬಿಯಲ್ಲಿ ಅರ್ಧದಷ್ಟು ಜೇನು ತುಪ್ಪವನ್ನು ತೆಗೆದು ಕೊಳ್ಳಿ. ಇದರಲ್ಲಿ ಖರ್ಜೂರವನ್ನು ಹಾಕಿ ಒಂದು ಒಂದು ವಾರದ ಕಾಲ ಹಾಗೆಯೇ ಬಿಡಿ. ಕರ್ಜೂರ ಜೇನು ತುಪ್ಪದಲ್ಲಿ ಚೆನ್ನಾಗಿ ನೆನೆದ ನಂತರ ದಿನವೂ ಒಂದೊಂದು ಖರ್ಜೂರವನ್ನು ಇದರಿಂದ ತೆಗೆದುಕೊಂಡು ತಿನ್ನಿ.

ಇದರಿಂದ ಅನೇಕ ಪ್ರಯೋಜನಗಳಿವೆ. ಹೇಗೆ ದಿನವು ಒಂದೊಂದು ಜೇನುತುಪ್ಪದಲ್ಲಿ ನೆನೆಸಿದ ಖರ್ಜೂರ ತಿನ್ನುವುದರಿಂದ ಕೆಮ್ಮು ಶೀತ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ. ಶ್ವಾಸಕೋಶದ ತೊಂದರೆಯಿರುವವರಿಗೆ ತುಂಬಾ ಒಳ್ಳೆಯದು.

ಅಲ್ಲದೆ, ಮಾನಸಿಕ ಕಾಯಿಲೆಗಳು ಇದರಿಂದ ದೂರವಾಗುತ್ತವೆ. ನಮ್ಮ ದೇಹದ ಒಳಗಡೆ ಗಾಯಗಳು ಆಗಿದ್ದರೆ ಅವು ಸಹ ಮಾಗುತ್ತವೆ. ಮನಸ್ಸಿನ ಒತ್ತಡ ಖರ್ಜೂರದ ಸೇವನೆಯಿಂದ ದೂರವಾಗುತ್ತವೆ.

ಇದರಲ್ಲಿ ಮಹಿಳೆಯರಿಗೆ ಬೇಕಾಗುವ ಕ್ಯಾಲ್ಸಿಯಂ ಹಾಗೂ ಪ್ರೊಟೀನ್ ಅಧಿಕವಾಗಿರುವುದರಿಂದ ರಕ್ತಹೀನತೆಯು ಕಡಿಮೆಯಾಗುತ್ತದೆ ಮತ್ತು ಚರ್ಮ ಸಂಬಂಧಿತ ಕಾಯಿಲೆಗಳು ದೂರವಾಗುತ್ತವೆ. ಇದು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಮತ್ತು ಮರೆವಿನ ಕಾಯಿಲೆ ಶಮನವಾಗುತ್ತದೆ.

ಈ ಮಿಶ್ರಣವು ಉದರ ಸಂಬಂಧಿತ ಕಾಯಿಲೆಗಳನ್ನು ದೂರ ಮಾಡುತ್ತದೆ.ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ರಕ್ತವನ್ನು ಶುದ್ಧೀಕರಿಸಿ ಹೃದಯ ಸಂಬಂಧಿ ಕಾಯಿಲೆಗಳಿಂದ ನಮ್ಮನ್ನು ದೂರವಾಗಿಸುತ್ತದೆ.

ಇನ್ನು ಈ ಮಿಶ್ರಣವನ್ನು ಹಾಲಿನಲ್ಲಿ ಹಾಕಿಕೊಂಡು ಸೇವಿಸುವುದರಿಂದ ಮಕ್ಕಳಲ್ಲಿ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಕರಗಿಸಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.

Comments are closed.