ಕರಾವಳಿ

ಮಾ.22 : ಉದ್ಯೋಗ ಪಡೆಯುವುದು ಹೇಗೆ?’ ಉಚಿತ ಮಾರ್ಗದರ್ಶನ ಶಿಬಿರ

Pinterest LinkedIn Tumblr

ಮಂಗಳೂರು : ನಿಖರವಾದ ಕರಿಯರ್ ಪ್ಲಾನಿಂಗ್ ಮಾಡಿಕೊಳ್ಳದಿರುವುದು, ಔದ್ಯೋಗಿಕ ಕೌಶಲ ಮತ್ತು ಮಾಹಿತಿ ಮಾರ್ಗದರ್ಶನಗಳ ಕೊರತೆಯಿಂದಾಗಿ ಸಮಾಜದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ನಗರದ ದಿ ಕ್ಯಾಂಪಸ್ ಕರಿಯರ್ ಅಕಾಡಮಿ ಮತ್ತು ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಮಾ. 22ರಂದು ಸಂಜೆ ಗಂ. 4.30ರಿಂದ 6.30ರ ತನಕ ಆಸಕ್ತ ವಿದ್ಯಾರ್ಥಿ, ಯುವಜನರಿಗೆ “ಉದ್ಯೋಗ ಪಡೆಯುವುದು ಹೇಗೆ” ಎಂಬ ವಿಷಯವನ್ನು ಕೇಂದ್ರವಾಗಿರಿಸಿ ಮಾರ್ಗದರ್ಶನ ಶಿಬಿರವೊಂದನ್ನು ಹಮ್ಮಿಕೊಂಡಿದೆ.

ನಗರದ ಸ್ಟೇಟ್‍ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರುವ ಅಲ್ ರಹಬಾ ಪ್ಲಾಝಾದ 2ನೇ ಮಹಡಿಯಲ್ಲಿರುವ ದಿ ಕ್ಯಾಂಪಸ್ ಕರಿಯರ್ ಅಕಾಡಮಿಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಕರಿಯರ್ ಪ್ಲಾನಿಂಗ್, ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳು, ಸ್ವಉದ್ಯೋಗ ಮತ್ತು ಔದ್ಯೋಗಿಕ ಕೌಶಲಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಲಾಗುವುದು.

ಪ್ರವೇಶ ಉಚಿತವಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಕರಿಯರ್ ಕೌನ್ಸಿಲರ್ ಉಮರ್ ಯು. ಹೆಚ್., ಶಿಕ್ಷಣ ತಜ್ಞ ಎಂ. ಜಿ. ಹೆಗ್ಡೆ ಮತ್ತು ಹಿರಿಯ ಪತ್ರಕರ್ತ ಎಸ್. ನಂದಗೋಪಾಲ್ ಭಾಗವಹಿಸಲಿದ್ದಾರೆ. ಆಸಕ್ತರು ಹೆಸರು ನೋಂದಾವಣೆಗಾಗಿ ದಿ ಕ್ಯಾಂಪಸ್ ಕರಿಯರ್ ಅಕಾಡಮಿ, 2ನೇ ಮಹಡಿ, ಅಲ್ ರಹಬಾ ಪ್ಲಾಝಾ, ನೆಲ್ಲಿಕಾಯಿ ರಸ್ತೆ, ಸ್ಟೇಟ್ ಬ್ಯಾಂಕ್, ಮಂಗಳೂರು, ದೂರವಾಣಿ ಸಂಖ್ಯೆ 08244261320, 9845054191 ನ್ನು ಸಂಪರ್ಕಿಸಬಹುದೆಂದು ದಿ ಕ್ಯಾಂಪಸ್ ಕರಿಯರ್ ಅಕಾಡಮಿಯ ನಿರ್ದೇಶಕ ಉಮರ್ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.