ಕರಾವಳಿ

ಪಕ್ಷಿಗಳಿಗೆ ಆಹಾರ ನೀಡುತ್ತಿದ್ದರೆ ಇಂದೇ ನಿಲ್ಲಿಸಿ…?

Pinterest LinkedIn Tumblr

ಸಿಲಿಕಾನ್‍ ಸಿಟಿಯ ಪಾರ್ಕ್ ಗಳಲ್ಲಿ, ಕೆರೆಗಳ ಬಳಿ ಸ್ವಚ್ಛಂದವಾಗಿ ಸಂಚರಿಸುತ್ತಿದ್ದ ಪಕ್ಷಿಗಳ ಪ್ರಾಣಕ್ಕೆ ಸಂಚಕಾರ ಬಂದಿದೆ. ಇದಕ್ಕೆ ಕಾರಣ ಜ್ಯೋತಿಷಿ ಮಾತು ಕೇಳಿ ಪಕ್ಷಿಗಳಿಗೆ ಹಾಕುತ್ತಿರುವ ಆಹಾರ..!

ಹೌದು, ಮಕ್ಕಳಾಗದಿದ್ದವರು, ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್‍ ಆಗಬೇಕೆಂದು ಬಯಸುವವರು ಜ್ಯೋತಿಷಿಯ ಮಾತು ಕೇಳಿ ಪಕ್ಷಿಗಳಿಗೆ ಹುರಿಗಡಲೆ, ಖಾರ ಬೂಂದಿ ಸೇರಿದಂತೆ ಮನೆಯಲ್ಲಿರುವ ಎಣ್ಣೆ ಪದಾರ್ಥಗಳನ್ನು ತಂದು ಹಾಕುತ್ತಿದ್ದಾರೆ. ಇವುಗಳನ್ನು ತಿಂದು ಪಕ್ಷಿಗಳು ಸಾವನ್ನಪ್ಪುತ್ತಿವೆ.

ಪಕ್ಷಿಗಳು ಇಂತಹ ಆಹಾರ ತಿನ್ನುವುದರಿಂದ ಅವುಗಳಿಗೆ, ಸರಿಯಾಗಿ ಜೀರ್ಣಕ್ರಿಯೆ ಆಗುವುದಿಲ್ಲ. ಜೊತೆಗೆ ಬಾಯಾರಿಕೆ ಹೆಚ್ಚಾಗುತ್ತದೆ. ಆದ್ರೆ ಕುಡಿಯಲು ಸರಿಯಾಗಿ ನೀರು ಕೂಡಾ ಸಿಗುವುದಿಲ್ಲ. ಇದ್ರಿಂದಾಗಿ ಪಕ್ಷಿಗಳು ಸಾವನ್ನಪ್ಪುತ್ತಿವೆ.

ಏಪ್ರಿಲ್‍ ನಲ್ಲಂತೂ ಸೂರ್ಯನ ತಾಪಕ್ಕೆ ಪಕ್ಷಿಗಳು ನಾನಾ ತರದ ರೋಗಗಳಿಂದ ಬಳಲಿ ಸಾವನ್ನಪ್ಪುತ್ತಿವೆ .ಹೀಗಾಗಿ ದಯವಿಟ್ಟು ಜ್ಯೋತಿಷಿಗಳ ಮಾತು ಕೇಳಿ ಪಕ್ಷಿಗಳಿಗೆ ಇಂತಹ ಆಹಾರ ತಂದು ಹಾಕಬೇಡಿ ಅಂತಾ ಪಕ್ಷಿ ಪ್ರಿಯರು ಮನವಿ ಮಾಡಿಕೊಂಡಿದ್ದಾರೆ.

Comments are closed.