ಗಂಟಲು ನೋವು ಎಂದರೆ ಮಾತನ್ನ ಕಟ್ಟಿಹಾಕಿದ ಹಾಗೆ ಗಂಟಲು ನೋವು ಬಂದರೆ ಮಾತಾಡಲು ತುಂಬಾ ಕಷ್ಟವಾಗುತ್ತದೆ. ನಮ್ಮ ದ್ವನಿ ನಮಗೆ ಬಿಟ್ಟರೆ ಬೇರೆಯವರಿಗೆ ಕೇಳಿಸುವುದೇ ಇಲ್ಲ, ಅಷ್ಟರ ಮಟ್ಟಿಗೆ ಗಂಟಲು ತನ್ನ ಶಕ್ತಿ ಸಾಮರ್ಥ್ಯಗಳನ್ನು ಕಳೆದುಕೊಂಡು ಬಿಡುತ್ತದೆ, ಇಂತಹ ಗಂಟಲು ನೋವು ಬಂದರೆ ಚಿಂತಿಸ ಬೇಡಿ ಸುಲಭವಾಗಿ ಮನೆಯಲ್ಲೇ ಇದನ್ನ ಗುಣಪಡಿಸಿಕೊಳ್ಳ ಬಹುದು.
ಲಿಂಬೆ ಹಣ್ಣು : ಗಂಟಲು ನೋವಿನಿಂದ ಗುಣಮುಖರಾಗಲು ಲಿಂಬೆ ಹಣ್ಣನ್ನು ಬಳಸಬಹುದು. ಇದು ನಿಮ್ಮ ಗಂಟಲಿನಲ್ಲಿರುವ ಸಿಂಬಳವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಲಿಂಬೆರಸ ವನ್ನು ಬಿಸಿ ನೀರಿಗೆ ಬೆರೆಸಿ, ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಸೇವಿಸಿ, ಒಂದು ಕಪ್ ಬಿಸಿ ನೀರಿಗೆ ಒಂದು ಟೀ ಸ್ಪೂನ್ ಜೇನು ತುಪ್ಪ ಮತ್ತು ಅದಕ್ಕೆ ಅರ್ಧ ಹೋಳು ಲಿಂಬೆ ಹಣ್ಣಿನ ರಸದ ಅನುಪಾತದಲ್ಲಿ ಇದನ್ನು ತಯಾರಿಸಿಕೊಳ್ಳಿ.
ಉಪ್ಪು ನೀರು : ಗಂಟಲು ನೋವಿಗೆ ರಾಮಬಾಣ ಎನಿಸಿಕೊಂಡಿರುವ ಪರಿಹಾರ ಉಪ್ಪು ನೀರು. ಹೌದು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಅದನ್ನು ಮುಕ್ಕಳಿಸುವ ಮೂಲಕ ನಿಮ್ಮ ಗಂಟಲ ನೋವನ್ನು ನಿವಾರಿಸಿಕೊಳ್ಳಬಹುದು. ಹೇಳಿ ಕೇಳಿ ಉಪ್ಪು ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿರುವ ಉತ್ಪನ್ನವಾಗಿದ್ದು, ಅದು ನಿಮ್ಮ ಗಂಟಲಿನಲ್ಲಿರುವ ಸಿಂಬಳದ ಪೊರೆಯು ನಿವಾರಣೆಯಾಗಲು ಸಹಾಯ ಮಾಡುತ್ತದೆ.
ಜೊತೆಗೆ ಇದು ನಿಮ್ಮ ಗಂಟಲಿನಲ್ಲಿರುವ ಕಫವು ಸಹ ನಿವಾರಣೆಯಾಗುವಂತೆ ಮಾಡುತ್ತದೆ ಮತ್ತು ಉರಿಬಾವು ನಿಮ್ಮನ್ನು ಕಾಡದಂತೆ ತಡೆಯುತ್ತದೆ, ಇಷ್ಟೆ ಅಲ್ಲದೆ ಇದು ನಿಮ್ಮ ಗಂಟಲ ನೋವಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಒಂದು ವೇಳೆ ನಿಮಗೆ ಉಪ್ಪು ಅಷ್ಟಾಗಿ ರುಚಿಸದಿದ್ದಲ್ಲಿ, ಈ ನೀರಿಗೆ ಸ್ವಲ್ಪ ಪ್ರಮಾಣದ ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಮುಕ್ಕಳಿಸಿ, ಆದರೆ ನುಂಗಬೇಡಿ. ಮುಕ್ಕಳಿಸಿದ ನೀರನ್ನು ಹೊರಗೆ ಉಗಿಯಿರಿ. ದಿನಕ್ಕೆ ನಾಲ್ಕೈದು ಬಾರಿ ಇದನ್ನು ಮಾಡಿದರೆ ನಿಮ್ಮ ಗಂಟಲು ನೋವು ನಿವಾರಣೆಯಾಗುತ್ತದೆ.
Comments are closed.