ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಮಹಿಳಾಮಣಿಯರದ್ದೇ ದರ್ಬಾರ್!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲೀಗ ಮಹಿಳಾ ಮಹಿಣಿಯರೇ ಮುಂಚೂಣಿಯಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಆದಿಯಾಗಿ ಪೊಲೀಸ್ ವರಿಷ್ಟಾಧಿಕಾರಿಯವರೆಗೂ ಜಿಲ್ಲೆಯಲ್ಲಿ ಮಹಿಳೆಯರದ್ದೇ ಮೇಲುಗೈ.

ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಪೊಲೀಸ್ ವರಿಷ್ಟಾಧಿಕಾರಿ ನಿಶಾ ಜೇಮ್ಸ್, ಸಂಸದೆ ಶೋಭಾ ಕರಂದ್ಲಾಜೆ, ಜಿ.ಪಂ. ಸಿಇಒ ಸಿಂಧು ಬಿ. ರೂಪೇಶ್‌ ಸೇರಿದಂತೆ ವಿವಿದೆಡೆ ಮಹಿಳೆಯರ ದಿಟ್ಟತನ ಪ್ರದರ್ಶಿಸುತ್ತಿದ್ದಾರೆ.

ಕಾನೂನು ಸುವ್ಯವಸ್ಥೆ, ಜಿಲ್ಲೆಯ ದಂಡಾಧಿಕಾರಿಯ ಕರ್ತವ್ಯ, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ಹುದ್ದೆ ಅವಕಾಶ ಸಿಗಬೇಕೆಂಬ ಕನಸು ನನಸಾಗುವ ಈ ಕಾಲಘಟ್ಟದಲ್ಲಿ ವಿಶ್ವ ಮಹಿಳಾ ದಿನಾಚರಣೆಗೆ ಒಂದು ವಿಶೇಷ ಅರ್ಥ ಬಂದಂತಾಗಿದೆ.

Comments are closed.