ಕರಾವಳಿ

ತಕ್ಷಣ ಮರಳು ಸಮಿತಿ ಸದಸ್ಯರ ಸಭೆ ಕರೆದು ಸಮಸ್ಯೆ ಪರಿಹಾರ ಮಾಡಿ: ಶಾಸಕ ಕೆ. ರಘುಪತಿ ಭಟ್

Pinterest LinkedIn Tumblr

ಉಡುಪಿ: ಜಿಲ್ಲೆಯ ನಾನ್ ಸಿ.ಆರ್.ಝಡ್ ಪ್ರದೇಶದಲ್ಲಿ ಮರಳುಗಾರಿಕೆ ನಡೆಸಲು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅನುಮತಿ ದೊರೆತಿದ್ದು KSCZM ಪರಿಸರ ಸಮಿತಿಯಿಂದಲೂ ೭.೮೦ ಲಕ್ಷ ಮೆಟ್ರಿಕ್ ಟನ್ ಮರಳು ಮಂಜೂರಾಗಿರುತ್ತದೆ.

ಆದ್ದರಿಂದ ತಕ್ಷಣ ಉಡುಪಿ ಜಿಲ್ಲಾಧಿಕಾರಿಗಳು ಏಳು ಸದಸ್ಯರ ಸಮಿತಿ(ಮರಳು ಸಮಿತಿಯ ಸದಸ್ಯರ) ಸಭೆಯನ್ನು ಕರೆದು ಮರಳು ವಿತರಣೆ ಮಾಡುವುದು ಬಾಕಿ ಇದ್ದು ಕೂಡಲೇ ಈ ಪ್ರಕ್ರಿಯೆ ಆಗಬೇಕು.

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದರೆ ಅನುಮತಿ ನೀಡಲು ಮತ್ತಷ್ಟು ಸಮಸ್ಯೆ ಆಗಬಹುದೆಂಬ ನಿಟ್ಟಿನಲ್ಲಿ ಮಂಗಳವಾರವೇ ಸಭೆ ಕರೆದು ಮರಳುಗಾರಿಕೆಗೆ ಅನುಮತಿ ನೀಡಬೇಕು ಮತ್ತು ಜಿಲ್ಲೆಯಲ್ಲಿ ಬಡ ಜನರು ಮರಳುಗಾರಿಕೆ ಇಲ್ಲದೆ ಅನುಭವಿಸುವ ಕಷ್ಟವನ್ನು ದೂರಮಾಡಬೇಕು ಎಂಬ ಉದ್ದೇಶದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

Comments are closed.