ಕರಾವಳಿ

ವೈಶ್ಯಾವಾಟಿಕೆ ನಡೆಯುತ್ತಿದ್ದ ಬಿಜೈ ಲಾಡ್ಜ್‌ಗೆ ಸಿಸಿಬಿ ದಾಳಿ : ಮೂವರ ಸೆರೆ – ಇಬ್ಬರು ಪರಾರಿ

Pinterest LinkedIn Tumblr

ಮಂಗಳೂರು, ಮಾ.05: ವೇಶ್ಯಾವಾಟಿಕೆಗೆ ದಂಧೆ ನಡೆಸುತ್ತಿದ್ದ ನಗರದ ಲಾಡ್ಜ್ ಒಂದಕ್ಕೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರು ಯುವತಿಯರನ್ನು ರಕ್ಷಿಸಿ, ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಂಟ್ವಾಳದ ಚಂದ್ರಶೇಖರ್ ಯಾನೆ ಚಂದ್ರು (32), ಉಪ್ಪಿನಂಗಡಿಯ ನಾಸಿರ್ (26) ಹಾಗೂ ಮಣ್ಣಗುಡ್ಡೆಯ ಅಶೋಕ (24) ಎಂದು ಗುರುತಿಸಲಾಗಿದೆ. ಲಾಡ್ಜಿನ ಮಾಲಿಕ ಅಬ್ದುಲ್ ರಜಾಕ್ , ಪಿಂಪ್ ಜೀವನ್ ತಪ್ಪಿಸಿಕೊಂಡಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಬಿಜೈ ಕೆ ಎಸ್ ಆರ್.ಟಿಸಿ ಸಮೀಪದ  ಹೊಟೇಲ್ ಸೂರ್ಯ ಕಂಫರ್ಟ್ ವಸತಿ ಗೃಹವೊಂದರಲ್ಲಿ ಯುವತಿಯರನ್ನು ಮಾನವ ಕಳ್ಳ ಸಾಗಣೆ ನಡೆಸಿ ವೇಶ್ಯಾವಾಟಿಕೆಗೆ ಬಳಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲ್ಕತ್ತ ಮೂಲದ ನೊಂದ ಇಬ್ಬರು ಯುವತಿಯರನ್ನು ರಕ್ಷಿಸಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಲಾಗಿದೆ.

ವೇಶ್ಯಾವಟಿಕೆ ಬಳಸಿದ 5 ಮೊಬೈಲ್ ಪೋನ್ ಗಳು ಮತ್ತು ನಗದು ಹಣ 19,500ರೂಪಾಯಿ, ಒಂದು ಆಲ್ಟೋ ಕಾರನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಇಕಾನಮಿಕ್ & ನಾರ್ಕೋಟಿಕ್ ಪೋಲಿಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಐ.ಪಿ.ಎಸ್, ಪೊಲೀಸ್ ಉಪ ಆಯುಕ್ತರಾದ ಹನುಮಂತರಾಯ, (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಉಮಾ ಪ್ರಶಾಂತ್ (ಅಪರಾಧ & ಸಂಚಾರ) ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಇಕಾನಮಿಕ್ & ನಾರ್ಕೋಟಿಕ್ ಪೋಲಿಸ್ ಠಾಣೆ ಇನ್ಸಪೆಕ್ಟರ್, ರಾಮಕೃಷ್ಣ ,ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Comments are closed.