ರಾಷ್ಟ್ರೀಯ

ಮಸೂದ್ ಅಜರ್ ಇನ್ನು ಜೀವಂತ -ಪಾಕ್ ಮೀಡಿಯಾ

Pinterest LinkedIn Tumblr


ನವದೆಹಲಿ: ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಸತ್ತಿಲ್ಲ ಇನ್ನು ಜೀವಂತವಾಗಿದ್ದಾನೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.ಸಾಮಾಜಿಕ ಮಾಧ್ಯಮಗಳಲ್ಲಿ ಅವನು ಸತ್ತಿದ್ದಾನೆ ಎನ್ನುವ ವರದಿ ಬಂದ ಹಿನ್ನಲೆಯಲ್ಲಿ ಈಗ ಪಾಕ್ ಮಾಧ್ಯಮಗಳು ಸ್ಪಷ್ಟಪಡಿಸಿವೆ.

ಈ ಕುರಿತಾಗಿ ಪ್ರಕಟನೆ ಮಾಡಿರುವ ಜಿಯೋ ಉರ್ದು ನ್ಯೂಸ್ ” ಜೆಇಎಂ ಮುಖ್ಯಸ್ಥನ ಕುಟುಂಬಕ್ಕೆ ಹತ್ತಿರವಿರುವವರು ಹೇಳಿರುವಂತೆ ಮಸೂದ್ ಅಜರ್ ಜೀವಂತವಾಗಿದ್ದಾನೆ .ಆದರೆ ಅವನ ಆರೋಗ್ಯ ಸ್ಥಿತಿಯ ಕುರಿತಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎನ್ನಲಾಗಿದೆ.ಇನ್ನು ಈ ಕುರಿತಾಗಿ ಪಾಕ್ ಸರ್ಕಾರವು ಕೂಡ ಅಧಿಕೃತ ಹೇಳಿಕೆಯನ್ನು ನೀಡಿಲ್ಲ ಎನ್ನಲಾಗಿದೆ.ಈ ಕುರಿತಾಗಿ ಪಾಕ್ ಸಚಿವ ಫವಾದ್ ಚೌಧರಿ ಪ್ರಶ್ನಿಸಿದಾಗ “ತಮಗೆ ಈ ಸಂದರ್ಭದಲ್ಲಿ ಏನೂ ಗೊತ್ತಿಲ್ಲ” ಎಂದು ಉತ್ತರಿಸದೆ ಜಾರಿಕೊಂಡರು ಎನ್ನಲಾಗಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹಾಲ್ಪುರ್ ನಿವಾಸಿಯಾಗಿರುವ ಮಸೂದ್ ಅಜರ್ 1999 ರಲ್ಲಿ ಎನ್ ಡಿ ಎ ಸರ್ಕಾರ ಬಿಡುಗಡೆ ಮಾಡಿತ್ತು, ನಂತರ ಅವರು ಸಂಸತ್ತಿನ ಮೇಲೆ ದಾಳಿ, ಜಮ್ಮು ಕಾಶ್ಮೀರದ ವಿಧಾನಸಭೆ ಮೇಲೆ ದಾಳಿ ,ಹಾಗೂ ಇತ್ತೀಚಿಗಿನ ಪುಲ್ವಾಮಾ ದಾಳಿಯ ಮುಖ್ಯ ಸೂತ್ರದಾರ ಎನ್ನಲಾಗಿದೆ.

Comments are closed.