ರಾಷ್ಟ್ರೀಯ

ವಾಯುಪಡೆಯ ದಾಳಿಗೆ 250 ಕ್ಕೂ ಅಧಿಕ ಉಗ್ರರು ಹತ್ಯೆ -ಅಮಿತ್ ಶಾ

Pinterest LinkedIn Tumblr


ನವದೆಹಲಿ: ಪಾಕಿಸ್ತಾನದ ಬಾಲಕೋಟ್ ನ ಉಗ್ರರ ನೆಲೆಯ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದ್ದಕ್ಕೆ 250 ಕ್ಕೂ ಅಧಿಕ ಉಗ್ರರು ಹತ್ಯೆಯಾಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಅವರ ಹೇಳಿಕೆಯೂ ಕೇಂದ್ರ ಸಚಿವ ಎಸ್.ಎಸ್. ಅಹ್ಲುವಾಲಿಯಾ ಅವರ ಹೇಳಿಕೆಯ ನಂತರ ಬಂದಿದೆ.

ಅಮಿತ್ ಷಾ ಅಹ್ಮದಾಬಾದ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಉರಿ ನಂತರ, ನಮ್ಮ ಪಡೆಗಳು ಪಾಕಿಸ್ತಾನಕ್ಕೆ ಹೋಗಿ ಸರ್ಜಿಕಲ್ ಸ್ಟ್ರೈಕ್ ಕೈಗೊಂಡು ಸೈನಿಕರ ಸಾವಿಗೆ ಪ್ರತೀಕಾರ ತೆಗೆದುಕೊಂಡರು. ಪುಲ್ವಾಮಾದ ನಂತರ, ಯಾವುದೇ ಸರ್ಜಿಕಲ್ ಸ್ಟ್ರೈಕ್ಗಳಿಲ್ಲ ಎಂದು ಪ್ರತಿಯೊಬ್ಬರೂ ಭಾವಿಸಿದರು, ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದಾಳಿಯ 13 ನೇ ದಿನದ ನಂತರ ಸರಕಾರ ವಾಯುದಾಳಿ ನಡೆಸಿ 250 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ “ಎಂದು ಹೇಳಿದರು.

ಇದಕ್ಕೂ ಮೊದಲು ಕೇಂದ್ರ ಸಚಿವ ಅಹ್ಲುವಾಲಿಯಾ ಮಾತನಾಡುತ್ತಾ “ನಾನು ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳನ್ನು ಫಾಲೋ ಮಾಡಿದ್ದೇನೆ. ವಾಯು ಪಡೆಗಳ ದಾಳಿ ನಂತರ ಪ್ರಧಾನಿ ಮೋದಿ ಅವರ ಭಾಷಣವನ್ನು ಸಹ ಕೇಳಿದ್ದೇನೆ. ಅವರು ಎಂದಾದರೂ 300 ಉಗ್ರರು ಹತ್ಯೆಯಾಗಿದ್ದಾರೆ ಎಂದು ಹೇಳಿದ್ದಾರಾ? ಬಿಜೆಪಿ ಯಾವುದೇ ವಕ್ತಾರರು ಇದನ್ನು ದೃಢೀಕರಿಸಿದ್ದಾರಾ? ಅಮಿತ್ ಷಾ ರಂತವರು ಅಂತಹ ವಿಷಯ ಹೇಳಿದ್ದಾರಾ? ಅವರ ಬಾಗಿಲಿನಲ್ಲಿ ಬಾಂಬ್ ಹಾಕುವುದರ ಮೂಲಕ ಅವರನ್ನು ನಾಶ ಪಡಿಸುವ ಸಾಮರ್ಥ್ಯವಿರುವ ಸಂದೇಶವೊಂದನ್ನು ಕಳುಹಿಸಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದ್ದರು.

Comments are closed.