ಕರಾವಳಿ

ವೀರ ರಾಣಿ ಅಬ್ಬಕ್ಕ ಉತ್ಸವ ಜನಪದ ದಿಬ್ಬಣ

Pinterest LinkedIn Tumblr

ಮಂಗಳೂರು ಮಾರ್ಚ್ 03 : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಅವರು ಡೊಳ್ಳು ಭಾರಿಸುವುದರ ಮೂಲಕ 2019ನೇ ಸಾಲಿನ ವೀರರಾಣಿ ಅಬ್ಬಕ್ಕ ಉತ್ಸವದ ಜನಪದ ದಿಬ್ಬಣಕ್ಕೆ ಶನಿವಾರ ಸಂಜೆ ಚಾಲನೆ ನೀಡಿದರು.

ಉಸ್ತುವಾರಿ ಸಚಿವರು ಮಾತನಾಡಿ, ಅಬ್ಬಕ್ಕ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಬಹುದಿನಗಳಿಂದ ಸಿದ್ಧತೆ ನಡೆಸಿದ್ದು ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಹಾರೈಸಿದರು.

ವೀರ ರಾಣಿ ಅಬ್ಬಕ್ಕನ ಟ್ಯಾಬ್ಲೋ ಮತ್ತು ಚೆಂಡೆ, ಕೊಡೆ, ಕೀಲುಕುದುರೆ, ದಫ್, ಕೊರಗರ ಗಜ ಕುಣಿತ, ಹಾಲಕ್ಕಿ ಕುಣಿತ, ವೀರಗಾಸೆ, ಪೂಜಾ ಕುಣಿತ, ಕಂಗೀಲು, ಯಕ್ಷಗಾನ ವೇಷಗಳಿಂದ ಮೆರವಣಿಗೆ ಕಳೆಗಟ್ಟಿತು. ದಿಬ್ಬಣದಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದವು.

ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ತಹಶೀಲ್ದಾರ್ ಗುರುಪ್ರಸಾದ್ ನೇತೃತ್ವದಲ್ಲಿ ಆಯೋಜಿಸಲಾದ ಮೆರವಣಿಗೆ ತಂಡ ಭಾರತ್ ಪ್ರೌಢಶಾಲೆ ಉಳ್ಳಾಲದಿಂದ ಆರಂಭಗೊಂಡ ಮೆರವಣಿಗೆ ಉಳ್ಳಾಲ ಬೀಚ್‍ವರೆಗೆ ಸಾಗಿತು.

ವಿದುಷಿ ವಿದ್ಯಾ ರಾಧಾಕೃಷ್ಣ ಮತ್ತು ಬಳಗದಿಂದ ಸ್ವಾಗತ ನೃತ್ಯ, ಮಂಜೇಶ್ವರದ ಬಾಲಕೃಷ್ಣ ಬಳಗದವರಿಂದ ನೃತ್ಯ ಕಾರ್ಯಕ್ರಮ, ಉಳ್ಳಾಲದ ಸ್ಥಳೀಯ ಪ್ರತಿಭೆಗಳಿಂದ ವೀರರಾಣಿ ಅಬ್ಬಕ್ಕ ದ್ರಶ್ಯಶ್ರಾವ್ಯ ರೂಪಕ ಕಾರ್ಯಕ್ರಮ, ರಾಗ ಸಂಗಮ ಶಿವಮೊಗ್ಗ ತಂಡದಿಂದ ಸಂಗೀತ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.

Comments are closed.