ಉಡುಪಿ: ಹೊಸದಿಲ್ಲಿಯ ಸಂಸತ್ ಭವನದಲ್ಲಿರುವ ಎಸ್ಬಿಐ ಖಾತೆಯಲ್ಲಿದ್ದ ಸಂಬಳದಲ್ಲಿ 15.62ಲಕ್ಷ ರೂ. ಮೊತ್ತವನ್ನು ಪೇಟಿಎಂ ಆನ್ಲೈನ್ ಮೂಲಕ ಹ್ಯಾಕ್ ವಿತ್ ಡ್ರಾ ಮಾಡಿದವರ ವಿರುದ್ಧ ತನಿಖೆ ನಡೆಯುತ್ತಿದ್ದು ದಿಲ್ಲಿ ಪೊಲೀಸರಿಂದ ಮುಂಬೈ ಮೂಲದವನ ಬಂಧನವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಶೋಭಾ ಕರಂದ್ಲಾಜೆ ಮಾತನಾಡಿದರು.
25,000 ರೂ. ಖಾತೆಗೆ ಮರು ಜಮೆಯಾಗಿದೆ. 3 ತಿಂಗಳ ಸ್ಟೇಟ್ಮೆಂಟ್ ಪಡೆದಾಗ ಖಾತೆಯಿಂದ ದುಡ್ಡು ಲಪಟಾಯಿಸಿದ್ದು ಬೆಳಕಿಗೆ ಬಂದಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
Comments are closed.