ಕರಾವಳಿ

ಲಿಂಗತ್ವ ಅಲ್ಪಸಂಖ್ಯಾತೆ ಪರಿಚಯ ಗೌಡಾಗೆ ಸಚಿವೆ ಜಯಮಾಲ ಕಚೇರಿಯಲ್ಲಿ ಉದ್ಯೋಗ

Pinterest LinkedIn Tumblr

ಉಡುಪಿ: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಡಾ.ಜಯಮಾಲಾ ಅವರು ವಿಧಾನಸೌಧದ ಕಚೇರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತೆ, ಉಡುಪಿ ಜಿಲ್ಲೆಯ ಪರಿಚಯ ಗೌಡ ಎನ್ನುವರಿಗೆ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಿದ್ದು ಅವರು ಮಾರ್ಚ್ ಒಂದರಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಸಮಾಜದಲ್ಲಿ ಸಾಮಾನ್ಯವಾಗಿ ಕಡೆಗಣಿಸಲ್ಪಟ್ಟು, ನಿತ್ಯ ವಿವಿಧ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುವ ಲಿಂಗತ್ವ ಅಲ್ಪಸಂಖ್ಯಾತರ ಬದುಕಿಗೆ ನೆಲೆ ಕಲ್ಪಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ನಮ್ಮ ಕಚೇರಿಯಿಂದಲೇ ಈ ಕೆಲಸ ಅಕ್ಷರಶಃ ಜಾರಿಯಾಗಿದ್ದು ಸಂತೋಷ ತಂದಿದೆ. ಇದೊಂದು ಉತ್ತಮ ಆರಂಭವಾಗಿದೆ. ಸೂಕ್ತ ಅವಕಾಶ ಸಿಕ್ಕಿದರೆ, ಅರ್ಹತೆ ಕಲ್ಪಿಸಿದರೆ ಲಿಂಗತ್ವ ಅಲ್ಪಸಂಖ್ಯಾತರು ಸಹ ಎಲ್ಲರಂತೆಯೇ ಉತ್ತಮ ವಾತಾವರಣದಲ್ಲಿ ಚೆನ್ನಾಗಿ ಕೆಲಸ ಮಾಡಬಲ್ಲರು ಎನ್ನುವ ವಿಶ್ವಾಸ ನನಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.