ಕರಾವಳಿ

ಸೂರ್ಯನ ಸುಡುಬಿಸಿಲಿನಿಂದ ತಮ್ಮನ್ನು ತಾವು ರಕ್ಷಿಸಲು ಈ ಸಲಹೆ..

Pinterest LinkedIn Tumblr

ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಪ್ರಖರ ಕಾಣಿಸಿಕೊಳ್ಳುತ್ತಿದ್ದು, ಸೂರ್ಯಘಾತ ಮತ್ತು ಉಷ್ಣ ಘಾತ ಆಗುವ ಸಾಧ್ಯತೆಗಳಿರುವ ಬಗ್ಗೆ ಅನೇಕ ವೈದ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ, ಇದರಿಂದ ದೇಹದಲ್ಲಿ ಸೋಡಿಯಂ ಮತ್ತು ಪೊಟ್ಯಾಷಿಯಂ ಅಂಶ ಕಡಿಮೆಯಾಗಿ ಏರಿಳಿತ ಕಂಡು ಬಂದು ದೇಹ ನಿತ್ರಾಣಕ್ಕೆ ಬರುವುದು, ರಕ್ತದೊತ್ತಡ ಇಳಿಕೆಯಾಗುವುದು, ಪ್ರಯುಕ್ತ ಸಾರ್ವಜನಿಕರು ಬಿಸಿಲಿನ ವೇಳೆ ಈ ಕೆಳಕಂಡ ವಿಧಾನಗಳನ್ನು ಅನುಸರಿಸಲು ವಿನಂತಿಸಿಕೊಳ್ಳಲಾಗಿದೆ.

ಮಧ್ಯಾಹ್ನ ಬಿಸಿಲಿನ ವೇಳೆ ಕೋಡೆ ಬಳಸುವುದು.

ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವುದು.

ದ್ರವ ಆಹಾರ ಪದಾರ್ಥ ಸೇವಿಸುವುದು.

ಎಳನೀರು ಕಲ್ಲಂಗಡಿ ಹಣ್ಣುಗಳನ್ನು ಸೇವಿಸುವುದು.

ಸಾಧ್ಯವಾದಷ್ಟು ಬಿಳಿ ವಸ್ತ್ರ ಗಳನ್ನು ಬಳಸುವುದು.

ಮೊಸರು ಮತ್ತು ಮಜ್ಜಿಗೆ ಗೆ ಆದ್ಯತೆ ನೀಡುವುದು.

ಯಾವುದೇ ಕಾರಣಕ್ಕೂ ಇವುಗಳನ್ನು ಮಾಡಬೇಡಿ.

ಕಪ್ಪು ಬಟ್ಟೆ ತೋರಿಸಬೇಡಿ, ಬಿಸಿಲಲ್ಲಿ ಮನೆಗೆ ಹೋದ ತಕ್ಷಣ ಗಟಗಟನೆ ಫ್ರಿಡ್ಜ್ ವಾಟರ್ ಸೇವಿಸಬೇಡಿ.

ಅತಿಯಾಗಿ ಊಟ ಸೇವಿಸಬೇಡಿ, ಐಸ್ ಕ್ರೀಂ, ಫ್ರಿಡ್ಜ್ ನೀರು ಸೇವನೆ ಮಾಡದೆ ಇರುವುದೇ ಒಳ್ಳೆಯದು

Comments are closed.