ಕರಾವಳಿ

ಬೋಳೂರಿನಲ್ಲಿ 40 ಲಕ್ಷ ರೂ.ಗಳ ಕಾಮಗಾರಿಗೆ ಶಾಸಕ ಕಾಮತ್ ಚಾಲನೆ

Pinterest LinkedIn Tumblr

ಮಂಗಳೂರು ; ಮಂಗಳೂರು ಮಹಾನಗರ ಪಾಲಿಕೆಯ 27 ನೇ ಬೋಳೂರು ವಾರ್ಡಿನ ಮಠದಕಣಿ 4 ನೇ ಅಡ್ಡ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು ಅಲ್ಪಸಂಖ್ಯಾತರ ಅಭಿವೃದ್ಧಿ ನಿಧಿ 2018-19ರ ಅಡಿಯಲ್ಲಿ ಅಲ್ಪಸಂಖ್ಯಾತ ಕಾಲೋನಿ ಮೂಲಸೌಕರ್ಯ ಅಭಿವೃದ್ಧಿಯನ್ನು ಬೋಳೂರು ವಾರ್ಡಿನ ಮಠದಕಣಿ 4 ನೇ ಅಡ್ಡ ರಸ್ತೆಯಲ್ಲಿ ಮಾಡಲಾಗುವುದು. ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣ ನಡೆಸಲಾಗುವುದು.

ಆರೂವರೆ ಮೀಟರ್ ಅಗಲದ, ಅಂದಾಜು ನಾನೂರು ಮೀಟರ್ ಉದ್ದದ ಕಾಂಕ್ರೀಟಿಕರಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನ ಬಂದ ತಕ್ಷಣ ರಸ್ತೆಯ ಉಳಿದ ಭಾಗವನ್ನು ಕಾಂಕ್ರೀಟಿಕರಣ ಮಾಡಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದರು.

ಶಾಸಕರೊಂದಿಗೆ ಸ್ಥಳೀಯ ಮನಪಾ ಸದಸ್ಯೆ ಲತಾ ಕಮಲಾಕ್ಷ ಸಾಲ್ಯಾನ್, ಮಾಜಿ ಮನಪಾ ಸದಸ್ಯ ಕಮಲಾಕ್ಷ ಸಾಲ್ಯಾನ್, ಬಿಜೆಪಿ ಮಂಗಳೂರು ನಗರ ದಕ್ಷಿಣ ಉಪಾಧ್ಯಕ್ಷ ಜಗದೀಶ್ ಶೆಟ್ಟಿ, ಬಿಜೆಪಿ ಬೋಳಾರ್ ಅಧ್ಯಕ್ಷ ರಾಜೇಶ್ ಉರ್ವಾ, ಕಾರ್ಯದರ್ಶಿ ರಾಹುಲ್ ಶೆಟ್ಟಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ ಜೆ ಪೂಜಾರಿ ಬಿಜೆಪಿ ಮುಖಂಡರಾದ ಪುರಂದರ ಶೆಟ್ಟಿ ಬೋಳೂರು, ಉಮಾಶಂಕರ್ ಹಾಗೂ ಅನೇಕ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.