ಕರಾವಳಿ

ಶಿರಾಲಿ: ಮದ್ರಸ ತಜ್ವೀದುಲ್ ಕುರಾನ್ ಇದರ ವಾರ್ಷಿಕ ಸಾಂಸ್ಕ್ರತಿಕ ಕಾರ್ಯಕ್ರಮ

Pinterest LinkedIn Tumblr

ಜಾಮಿಯಾ ಮಸೀದಿ ಶಿರಾಲಿ ಇದರ ಉಸ್ತುವಾರಿಯಲ್ಲಿರುವ ಮದ್ರಸ ತಜ್ವೀದುಲ್ ಕುರಾನ್ ಇದರ ವಾರ್ಷಿಕ ಸಾಂಸ್ಕ್ರತಿಕ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು. 130 ಕ್ಕಿಂತಲೂ ಹೆಚ್ಚಿನ 15 ವರ್ಷದ ಕೆಳಗಿನ ಮಕ್ಕಳು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಮೌಲಾನಾ ಮುಸಾಬ್ ಅವರು ಆಯೋಜಿಸಿದ್ದರು.

ಕಳೆದ 15 ವರ್ಷಗಳಿಂದ ಸತತವಾಗಿ ಇಂತಹ ಕಾರ್ಯಕ್ರಮವನ್ನು ಸಂಘಟಿಸುತ್ತಿರುವ ಮಸ್ಜಿದೆ ರಹ್ಮಾನಿಯಾ ಇದರ ಯುವಕರು ಉತ್ತಮ ಸಂಘಟನಾತ್ಮಕವಾದ ಯುವಪಡೆ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡರು. ಪ್ರಸ್ತುತಃ ಸಮಾಜದಲ್ಲಿ ಮದ್ರಸ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಸಂಘಟಕರು ಮಕ್ಕಳಲ್ಲಿ ದೇಶಾಭಿಮಾನ, ಶಾಂತಿ ಸೌಹಾರ್ದತೆ ಹಾಗೂ ದುಶ್ಚಟಗಳಿಂದ ದೂರವಿರಲು ಈ ಕಾರ್ಯಕ್ರಮದ ಮೂಲಕ ಪ್ರೇರೇಪಿಸುತಿದ್ದಾರೆ.

ಕುರಾನ್ ಪಠಣದ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಮೌಲಾನಾ ಮಕ್ಬೂಲ್ ಅಹ್ಮದ್ ಸಾಹೇಬ್ ಕೊಬಟ್ಟೆ, ಮೌಲಾನಾ ಮೊಹಮ್ಮದ್ ಇಲ್ಯಾಸ್ ಸಾಹೇಬ್ ನದ್ವಿ, ಮೌಲಾನಾ ನಿಯಾಮತ್ ಉಲ್ಲಾ ಸಾಹೇಬ್ ಇಸ್ಕರಿ, ಡಾಕ್ಟರ್ ನಸೀಮ್ (MBBS )ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಹ್ಮಾನಿಯಾ ಜುಮ್ಮಾ ಮಸೀದಿಯಲ್ಲಿ ಕಳೆದ 50 ವರ್ಷಗಳಿಂದ ಮೌಜನ್ ಆಗಿ ಸೇವೆ ಸಲ್ಲಿಸಿದ್ದ ಜನಾಬ್ ಶೇಕ್ ಫರೀದ್ ಅವರನ್ನು ಸನ್ಮಾನಿಸಲಾಯಿತು.. ಜನಾಬ್ ಅನ್ವರ್ ಮೌಲಾನಾ ಅವರನ್ನು ಮಕ್ಕಳನ್ನು ಸಂಘಟಿಸಿ ಈ ಕಾರ್ಯಕ್ರಮ ಆಯೋಜಿಸಿದಕ್ಕಾಗಿ ವಿಶೇಷವಾಗಿ ಸನ್ಮಾನಿಸಲಾಯಿತು. ಮೊಹಮ್ಮದ್ ಇಕ್ರಾಜ್ ಅವರನ್ನು ಶಿರಾಲಿ ಪರಿಸರದಲ್ಲಿ ಮೊಟ್ಟಮೊದಲ ಹಾಫೀಜ್ ಆಗಿ ಆಯ್ಕೆಯಾಗಿದ್ದಕ್ಕಾಗಿ ಸನ್ಮಾನಿಸಿ ವಿಶೇಷವಾದ ಪುರಸ್ಕಾರವನ್ನು ನೀಡಲಾಯಿತು.

ಈ ಕಾರ್ಯಕ್ರಮಕ್ಕಾಗಿ ವಿದೇಶದಿಂದ ಶುಭಾಶಯಗಳನ್ನು ಕೋರಲಾಗಿದ್ದು ಮುಖ್ಯವಾಗಿ HMC ಯುನೈಟೆಡ್ ನ ಉಪಾಧ್ಯಕ್ಷ ಶೇಕ್ ಮುಝಫ್ಫರ್, ಹಾಗೆಯೇ ದುಬೈ, ಸೌದಿ ಅರೇಬಿಯಾ, ಮಸ್ಕತ್ ಸೇರಿದಂತೆ ಗಲ್ಫ್ ರಾಷ್ಟ್ರಗಳಿಂದ ಅನಿವಾಸಿ ಭಾರತೀಯರು ಶುಭಾಶಯ ಕೋರಿದರು.

ಈ ಕಾರ್ಯಕ್ರಮದ ಯಶಸ್ಸಿಗೆ ಹಗಲಿರುಳು ದುಡಿದ ಮಸೀದಿ ಆಡಳಿತ ಕಮಿಟಿಯ ಅಧ್ಯಕ್ಷರಾದ ಜನಾಬ್ ಖ್ವಾಜಾ ಶೇಕ್, ಉಪಾಧ್ಯಕ್ಷರಾದ ಜನಾಬ್ ಮನ್ಸೂರ್ ಶೇಕ್, ಕಾರ್ಯದರ್ಶಿಗಳಾದ ಜನಾಬ್ ಅಬ್ದುಲ್ ರವೂಫ್, ಖಜಾಂಚಿಗಳಾದ ಜನಾಬ್ ಜಾಫರ್ ಶೇಕ್, ಅವರನ್ನು ಕೂಡ ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಧನ್ಯವಾದ ಕೋರಲಾಯಿತು.  ಕೊನೆಯಲ್ಲಿ ನೌಜವಾನ್ ಕಮಿಟಿಯವರಿಂದ ಧನ್ಯವಾದ ಸಮರ್ಪಿಸಲಾಯಿತು..

ವರದಿ: ಶೇಕ್ ಮುಝಫ್ಫರ್, ದುಬೈ

Comments are closed.