ರಾಷ್ಟ್ರೀಯ

ಪ್ರಧಾನಿಗೆ ನಾಚಿಕೆ ಇಲ್ಲವೇ: ಮೋದಿ ವಿರುದ್ಧ ಹರಿಹಾಯ್ದ ನಾಯ್ಡು!

Pinterest LinkedIn Tumblr


ಅಮರಾವತಿ : ಆಂಧ್ರ ಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ವಾಕ್ ಪ್ರಹಾರ ಮುಂದುವರಿಸಿದ್ದಾರೆ.

2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸದೇ ಕಾಲಿ ಕೈಯಲ್ಲಿ ನಮ್ಮ ರಾಜ್ಯಕ್ಕೆ ಆಗಮಿಸಲು ನಾಚಿಕೆಯಾವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಮಾರ್ಚ್ 1 ರಂದು ವಿಶಾಖಪಟ್ಟಣಕ್ಕೆ ಮೋದಿ ಆಗಮಿಸುವ ನಿಟ್ಟಿನಲ್ಲಿ ಇಲ್ಲಿನ ಐದು ಕೋಟಿ ಜನಕ್ಕೆ ಸುಳ್ಳು ಆಶ್ವಾಸನೆ ನೀಡಿ ಈಗ ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ. ಆಡಳಿತಕ್ಕೆ ಬಂದು ಐದು ವರ್ಷವಾದರೂ ನೀಡಿದ ಭರವಸೆ ಈಡೇರಿಸಲು ಸಾಧ್ಯವಾಗಲಿಲ್ಲ. ಐದು ವರ್ಷದಲ್ಲಿ ತಾವು 29 ಬಾರಿ ಭೇಟಿ ನೀಡಿ ತಮ್ಮ ರಾಜ್ಯಕ್ಕೆ ಸೂಕ್ತ ಸ್ಥಾನ ಮಾನ ನೀಡಬೇಕು ಎಂದು ಕೇಳಿಕೊಂಡೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ ಎಂದರು.

ತಮ್ಮ ರಾಜ್ಯದ ಜನರಿಗೆ NDA ಮೈತ್ರಿಕೂಟದಿಂದ ಯಾವುದೇ ರೀತಿಯ ಅನುಕೂಲ ಸಿಗದ ಕಾರಣ ಮೈತ್ರಿಕೂಟವನ್ನೂ ತಾವು ತೊರೆದಿದ್ದಾಗಿ ನಾಯ್ಡು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಕ್ಕೆ ವಿಶೇಷ ಸ್ಥಾನ ಮಾನ ನೀಡಲು ಕೇಳಿಕೊಂಡಿದ್ದು, ಸಿಗಬೇಕಾದ ಅನುದಾನಗಳೂ ಕೂಡ ಸೂಕ್ತ ರೀತಿಯಲ್ಲಿ ಸಿಗಲಿಲ್ಲ. ಯಾವುದೇ ಅನುಕೂಲವನ್ನೂ ರಾಜ್ಯಕ್ಕೆ ಒದಗಿಸದೇ ಈಗ ರಾಜ್ಯಕ್ಕೆ ಬರುವ ಪ್ರಧಾನಿಗೆ ನಾಚಿಕೆಯಾಗಬೇಕು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Comments are closed.