ಕರ್ನಾಟಕ

ಪಾಕ್‍ಗೆ ಜಿಂದಾಬಾದ್ ಎಂದಿದ್ದ ಯುವಕನ ಪರ ವಕಲತ್ತು ವಹಿಸದಿರಲು ನಿರ್ಧಾರ

Pinterest LinkedIn Tumblr


ಬಳ್ಳಾರಿ: ಪುಲ್ವಾಮಾ ದಾಳಿಯಾದ ಬಳಿಕ ಪಾಕಿಸ್ತಾನ ಜಿಂದಾಬಾದ್ ಎಂದು ಪೋಸ್ಟ್ ಹಾಕಿ ಬಂಧನವಾಗಿರುವ ಯುವಕರ ಪರ ನ್ಯಾಯಾಲಯದಲ್ಲಿ ವಾದ ಮಾಡದೆ ಇರಲು ನ್ಯಾಯಾವಾದಿಗಳ ಸಂಘ ತೀರ್ಮಾನ ಮಾಡಿದೆ.

ದೇಶದ್ರೋಹಿ ಪೊಸ್ಟ್ ಹಾಕಿದ ಯುವಕನ ಪರವಾಗಿ ವಕಲತ್ತು ಮಾಡದಿರಲು ಹೂವಿನಹಡಗಲಿ ನ್ಯಾಯವಾದಿಗಳು ನಿರ್ಧಾರ ಮಾಡಿದ್ದು, ತಾಲೂಕಿನ ಹಿರೇಹಡಗಲಿ ಪೊಲೀಸರು ಮೊಹಬೂಬ್ ಮಜಾವರನನ್ನು ಸಾಮಾಜಿಕ ಜಾಲತಾಣದಲ್ಲಿ ಪಾಕ್ ಪರ ಘೋಷಣೆ ಪೋಸ್ಟ್ ಶೇರ್ ಮಾಡಿದ್ದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದರು.

ಮೆಹಬೂಬ್ ಸಾಮಾಜಿಕ ಜಾಲತಾಣದಲ್ಲಿ ಪಾಕ್ ಪರ ಪೋಸ್ಟ್ ಕಂಡ ಸ್ಥಳೀಯರು ಯುವಕನ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪ್ರೊಬೇಷನರಿ ಡಿವೈಎಸ್ಪಿ ಜಾವೇದ್ ಇನಾಂದಾರ್ ನೇತೃತ್ವದಲ್ಲಿ ಮೆಹಬೂಬ್ ನನ್ನು ಬಂಧಿಸಲಾಗಿತ್ತು. ಸದ್ಯ ನ್ಯಾಯವಾದಿಗಳ ಸಂಘ ತೀರ್ಮಾನದ ಅನ್ವಯ, ಆರೋಪಿ ಪರ ವಕಲತ್ತು ವಹಿಸುವುದು, ಜಾಮೀನಿಗೆ ಅರ್ಜಿ ಸಲ್ಲಿಸದಿರಲು ತೀರ್ಮಾನ ಮಾಡಲಾಗಿದೆ.

Comments are closed.