ಕರಾವಳಿ

ನಾಳೆಯಿಂದ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಕೃತಿ 2019- ತಾಂತ್ರಿಕ, ಸಾಂಸ್ಕೃತಿಕ ಉತ್ಸವ

Pinterest LinkedIn Tumblr

ಮಂಗಳೂರು: ಇಲ್ಲಿನ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಫೆ.28ರಿಂದ ಮಾ.2 ರವರೆಗೆ ರಾಜ್ಯ ಮಟ್ಟದ ತಾಂತ್ರಿಕ ಸಾಂಸ್ಕೃತಿಕ ಉತ್ಸವ ಆಕೃತಿ – 2019 ಜರಗಲಿದೆ.

ಫೆ.28ರಂದು ಬೆಳಿಗ್ಗೆ 9.30ಕ್ಕೆ ಕಾಲೇಜಿನ ಆವರಣದಲ್ಲಿ ನಡೆಯುವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ ಇನ್ಫೋಸಿಸ್ ಫಿನಾಕಲ್‌ನ ಗ್ಲೋಬಲ್ ಸೇಲ್ಸ್ ಹೆಡ್ ಹಾಗೂ ಹಿರಿಯ ಉಪಾಧ್ಯಕ್ಷರಾಗಿರುವ ವೆಂಕಟರಮಣ ಗೊಸಾವಿಯವರು ಆಕೃತಿ- 2019 ಅನ್ನು ಉದ್ಘಾಟಿಸಲಿದ್ದಾರೆ. ಕಾಲೇಜು ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಎಸ್. ಎಸ್. ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.

ರಾಜ್ಯದ ವಿವಿಧೆಡೆಗಳಿಂದ ಯುವ ವಿದ್ಯಾರ್ಥಿಗಳು ಪಾಲ್ಗೊಳ್ಳಲಿರುವ ಈ ಉತ್ಸವದಲ್ಲಿ 40ಕ್ಕೂ ಅಧಿಕ ಸ್ಪರ್ಧಾ ಕಾರ್ಯಕ್ರಮಗಳಿದ್ದು 6 ಮೆಘಾ ಇವೆಂಟ್‌ಗಳು, 18 ಸಾಂಸ್ಕೃತಿಕ, 13 ತಾಂತ್ರಿಕ ಹಾಗೂ 9 ಕ್ರೀಡಾ ಸ್ಪರ್ಧೆಗಳಿದ್ದು 2 ಲಕ್ಷದಷ್ಟು ಮೊತ್ತದ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಫುಡ್ ಸ್ಟಾಲ್, ಫ್ಲೀ ಮಾರ್ಕೆಟ್ ಸೇರಿದಂತೆ ಈ ಉತ್ಸವ ವಿವಿಧ ಆಕರ್ಷಣೆಗಳಿಂದ ಕೂಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ತಿಳಿಸಿದ್ದಾರೆ.

Comments are closed.