ರಾಷ್ಟ್ರೀಯ

ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪತನ, ಐವರು ಸಾವು

Pinterest LinkedIn Tumblr

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ವೊಂದು ಬುಧವಾರ ಪತನಗೊಂಡಿದ್ದು, ಐವರು ಮೃತಪಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಯುಪಡೆಯ ಎಂಐ- 17 ಹೆಲಿಕಾಪ್ಟರ್ ಇಂದು ಬದ್ಗಾಮ್ ನಿಂದ 10 ಕಿ.ಮೀ. ದೂರದಲ್ಲಿರುವ ಗರೆಂಡ್ ಕಲಾನ್ ಗ್ರಾಮದ ಬಳಿ ಬಯಲು ಪ್ರದೇಶದಲ್ಲಿ ಪತನವಾಗಿದ್ದು, ವಾಯುಪಡೆಯ ನಾಲ್ವರು ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ಈ ಅವಘಡದಲ್ಲಿ ಓರ್ವ ನಾಗರಿಕ ಸಹ ಮೃತಪಟ್ಟಿದ್ದು, ಆತನನ್ನು ಸ್ಥಳೀಯ ನಿವಾಸಿ ಕಿಫಾಯತ್ ಹುಸ್ಸೇನ್ ಎಂದು ಗುರುತಿಸಲಾಗಿದೆ.

ಹೆಲಿಕಾಪ್ಟರ್ ಪತನಕ್ಕೆ ತಾಂತ್ರಿಕ ವೈಫಲ್ಯ ಕಾರಣ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.