ಕರಾವಳಿ

ಮಣಿಪಾಲದ ಮನೆ ಬಳಿ ನಾಯಿ ಹಿಡಿಯಲು ಬಂದ ಚಿರತೆಯ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆ

Pinterest LinkedIn Tumblr

ಉಡುಪಿ: ಇಲ್ಲಿನ ಮಣಿಪಾಲದ ವಿದ್ಯಾರತ್ನ ನಗರದಲ್ಲಿ ಮಂಗಳವಾರ ರಾತ್ರಿ 7.50ರ ಸುಮಾರಿಗೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಚಿರತೆ ಚಲನವಲನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇಲ್ಲಿನ ನಿವಾಸಿಯಾಗಿರುವ ಬಿ.ಜಿ. ಮೋಹನದಾಸ್ ಎನ್ನುವರ ನಿವಾಸದೆದುರು ಸುಮಾರು 7.50 ರ ಹೊತ್ತಿಗೆ ಮನೆಯಲ್ಲಿನ ಎರಡು ನಾಯಿಗಳು ಜೋರಾಗಿ ಬೊಗಳಲು ಆರಂಭಿಸುತ್ತದೆ. ಈ ಸಂದರ್ಭ ಮನೆಯವರು ಸಿಸಿ ಟಿವಿ ಪರಿಶೀಲಿಸಿದ್ದು ಮನೆಯೆದುರು ಚಿರತೆಯಿರುವುದು ಕಾಣಿಸುತ್ತದೆ.

ಮನೆಯ ಸಣ್ಣ ಗೇಟ್ ಒಳಕ್ಕೆ ನುಗ್ಗಿ ನಾಯಿ ಹಿಡಿಯಲು ಚಿರತೆ ಮುಂದಾಗಿದ್ದು ಮನೆಯವರು ಹೊರಕ್ಕೋಡಿ ಬಂದು ಬೊಬ್ಬೆ ಹೊಡೆದಾಗ ಚಿರತೆ ರಸ್ತೆಯಲ್ಲಿ ಮುಂದಕ್ಕೆ ಓಡಿ ಮರೆಯಾಗಿದೆ. ಇದಾಗಿ ಅರ್ಧ ನಿಮಿಷದವರೆಗೂ ನಾಯಿಗಳು ಮನೆಯ ಎದುರು ಕೂಗುತ್ತಾ ಓಡಾಡುತ್ತಿರುವುದು ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಹಿಂದೆಯೂ ಕೂಡ ಮಣಿಪಾಲ ಭಾಗದಲ್ಲಿ ಚಿರತೆ ಹಾವಳಿಯಿಂದ ಜನರು ಕಂಗಾಲಾಗಿದ್ದರು. ಜನನಿಬೀಡ ಪ್ರದೇಶದಲ್ಲಿಯೇ ಸಂಜೆ ಹೊತ್ತಿಗೆ ಚಿರತೆ ಸಂಚಾರದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ವಾಸಿಗಳಲ್ಲಿ ಆತಂಕ ವ್ಯಕ್ತವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೂ ತರಲಾಗಿದೆ. ತಕ್ಷಣ ಈ ಬಗ್ಗೆ ಇಲಾಖೆ ಕ್ರಮಕೈಗೊಳ್ಳಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

(ವರದಿ-ಯೋಗೀಶ್ ಕುಂಭಾಸಿ)

Comments are closed.