ಕರಾವಳಿ

ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಅನುಕ್ತ”

Pinterest LinkedIn Tumblr

ಮಂಗಳೂರು : ದೇಯಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಉಡುಪಿ ಮೂಲದ ದುಬೈ ಉದ್ಯಮಿ ಹರೀಶ್ ಬಂಗೇರ ನಿರ್ಮಾಣದ ಬಹು ನಿರೀಕ್ಷಿತ ‘ಅನುಕ್ತ ‘ಕನ್ನಡ ಚಲನಚಿತ್ರ ಫೆ.1ರಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು, ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಅಶ್ವಥ್ ಸ್ಯಾಮುವೆಲ್ ನಿರ್ದೇಶನದಲ್ಲಿ ಮೂಡಿ ಬಂದ ಅನುಕ್ತ ಚಿತ್ರ ಹೇಳಲಾಗದ ಹಲವು ಸಂಗತಿಗಳನ್ನು ಬಚ್ಚಿಟ್ಟುಕೊಂಡು ಚಲನಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುವ ಕಥೆಯೊಂದಿಗೆ ತರೆದುಕೊಳ್ಳುತ್ತಾ ಸಾಗುತ್ತದೆ .ಕರಾವಳಿಯಲ್ಲಿ 1992ರಲ್ಲಿ ನಡೆದ ಕೊಲೆಯೊಂದರ ಹಿನ್ನೆಲೆಯ ಕೆಲವೊಂದು ನಿಗೂಢತೆಯ ಹೊಲೀಕೆ ಇದ್ದರು ಘಟನೆಯ ನೈಜ ಕಥೆಯನ್ನು ಒಳಗೊಂಡಿಲ್ಲ. ಕ್ರೈಮ್ ಥ್ರಿಲ್ಲರ್, ಕಥಾ ಹಂದರವನ್ನು ಹೊಂದಿದೆ. ಕರಾವಳಿಯ ದೈವಾರಾಧನೆಯ ಅಂಶಗಳು ಚಿತ್ರದಲ್ಲಿದೆ. ಪತ್ತೆದಾರಿ ಮಾದರಿಯಲ್ಲಿ ಚಿತ್ರ ಸಾಗುತ್ತದೆ.

ಕರಾವಳಿಯ ಸಂಸ್ಕೃತಿ ಹಾಗೂ ಪಾಕೃತಿಕ ಹಿನ್ನೆಲೆಯಲ್ಲಿ ನಿರ್ಮಾಣಗೊಂಡಿರುವ ಅನುಕ್ತ ಕನ್ನಡ ಸಿನಿಮಾ ರಂಗದಲ್ಲಿ ಕೆಲವೊಂದು ವಿಶೇಷತೆಗಳನ್ನೊಳ ಗೊಂಡ ಗುಣಮಟ್ಟದ ಚಿತ್ರವಾಗಿದೆ. ಬ್ರಹ್ಮಾವರದ 500 ವರ್ಷ ಪುರಾತನ ಮನೆಯಲ್ಲಿ ಚಿತ್ರದ ಕೆಲವು ಭಾಗ ಚಿತ್ರೀಕರಣಗೊಂಡಿದೆ. ಬೆಂಗಳೂರು ಪರಿಸರದಲ್ಲೂ ಕೆಲವು ಭಾಗ ಚಿತ್ರೀಕರಣಗೊಂಡಿದೆ. ಈಗಾಗಲೆ ತಮಿಳು ಮತ್ತು ಹಿಂದಿ ಚಿತ್ರದ ಡಬ್ಬಿಂಗ್‌ಹಕ್ಕಿನ ಮಾರಾಟ ಹೊಂದಿದ್ದು ಮಲೆಯಾಳಂನಲ್ಲಿ ರಿಮೇಕ್ ಮಾಡಲು ಮಾತುಕತೆ ನಡೆದಿದೆ.

ಉಡುಪಿ ಮೂಲದ (ಕಟಪಾಡಿ) ದುಬೈ ಉದ್ಯಮಿ ಹರೀಶ್ ಬಂಗೇರಾ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸುಧಾಕರ ಕುದ್ರೋಳಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ. ನೋಬಿನ್ ಪೌಲ್ ಸಂಗೀತ ಸಂಯೋಜಿಸಿದ್ದಾರೆ. ಸಂತೋಷ್ ಕುಮಾರ್, ನವೀನ್ ಶರ್ಮಾ, ಕಿರಣ್ ಶೆಟ್ಟಿ ಮಾತುಗಳನ್ನು ಪೋಣಿಸಿದ್ದಾರೆ.

ಚಿತ್ರದಲ್ಲಿ ನಾಯಕನಾಗಿ ಕಾರ್ತಿಕ್ ಅತ್ತಾವರ, ನಾಯಕಿಯಾಗಿ ಸಂಗೀತಾ ಭಟ್, ಜೊತೆಗೆ ಕನ್ನಡದ ಖ್ಯಾತ ನಟಿ ಅನುಪ್ರಭಾಕರ್, ಕಾಲಿವುಡ್, ಟಾಲಿವುಡ್‌ನ ಖ್ಯಾತ ನಟ ಸಂಪತ್ ರಾಜ್, ಉಳಿದಂತೆ ಶ್ರೀಧರ್, ಉಷಾ ಭಂಡಾರಿ, ಚಿದಾನಂದ ಪುಜಾರಿ, ಅನಿಲ್ ನಿನಾಸಮ, ರಮೇಶ್ ರೈ, ಸುಧಾಕರ ಕುದ್ರೋಳಿ, ಕೋಡ್ಲಿ ಲೀಮಾ, ರೋಶನ್ ಶೆಟ್ಟಿ ಮೊದಲಾದವರು ತಾರಗಣದಲ್ಲಿದ್ದಾರೆ.

Comments are closed.