ಕರಾವಳಿ

ಸುವರ್ಣ ತ್ರಿಭುಜ ಬೋಟ್‌ನ ಪತ್ತೆಗೆ ನೌಕಾಪಡೆಯ ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ

Pinterest LinkedIn Tumblr

ಉಡುಪಿ: ಮಲ್ಪೆ ಬಂದರಿನಿಂದ ಹೊರಟು ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್‌ನ ಪತ್ತೆಗೆ ನೌಕಾಪಡೆಯ ಅಧಿಕಾರಿಗಳು ಸಮುದ್ರದಲ್ಲಿ 35 ಮೀಟರ್‌ ಆಳಕ್ಕೆ ವರೆಗೆ ಹೋಗಿ ಶೋಧಿಸಿದ್ದಾರೆ. ಮುಂದಿನ ಹಂತದಲ್ಲಿ 60 ಮೀ. ಅಳಕ್ಕೆ ಇಳಿದು ಶೋಧಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಹೇಳಿದರು.

ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನೌಕಾ ಪಡೆಯ ಹಡಗಿನ ತಳಕ್ಕೆ ಹಾನಿಯಾಗಿರುವ ಸಮಯ, ಸುವರ್ಣ ತ್ರಿಭುಜದ ಸಂಪರ್ಕ ಕಡಿತ ಆಗಿರುವ ಸಮಯ ಇತ್ಯಾದಿಗಳ ಬಗ್ಗೆ ಸಂಶಯಗಳಿವೆ. ಹುಡುಕಾಟದ ವೇಳೆ ನೌಕಾಪಡೆಗೆ ಸಾಗರ ತಳದಲ್ಲಿ 23 ಮೀ. ಉದ್ದದ ಬೋಟೊಂದು ಕಂಡು ಬಂದಿದೆ. ಆದರೆ ಆಳದಲ್ಲಿ ಇರುವುದರಿಂದ ಸ್ಪಷ್ಟವಾಗಿ ಗೋಚರವಾಗಿಲ್ಲ. ಈ ಹಿಂದೆ ಯಾವತ್ತೋ ಮುಳುಗಿದ್ದ ಬೋಟಿನ ಅವಶೇಷವೋ ಎಂಬುದೂ ದೃಢವಾಗಿಲ್ಲ. ಸುವರ್ಣ ತ್ರಿಭುಜ ಬೋಟ್‌ 24 ಮೀಟರ್‌ ಇರುವುದರಿಂದ ಅದಕ್ಕೂ ಇದಕ್ಕೂ ತಾಳೆಯಾಗುವುದಿಲ್ಲ. ಸರಿಯಾದ ಪರಿಶೀಲನೆ ನಡೆಸಿದಾಗ ನಮ್ಮ ಎಲ್ಲ ಸಂಶಯಕ್ಕೆ ಉತ್ತರ ಸಿಗಲಿದೆ ಎಂದರು.

Comments are closed.