ಕರಾವಳಿ

ಉಡುಪಿಯಲ್ಲಿ ಮತ್ತೆ 9 ಮಂಗಗಳ ಶವ ಪತ್ತೆ; ಶಂಕಿತ ರೋಗಿಗಳಿಗೆ ನೀಡಲಾಗ್ತಿದೆ ಚಿಕಿತ್ಸೆ

Pinterest LinkedIn Tumblr

ಉಡುಪಿ: ಉಡುಪಿ ತಾಲೂಕಿನ ಅಲೆವೂರು ಅಂಬೇಡ್ಕರ್‌ ಭವನದ ಬಳಿ ಕಾಸಾನುಮಕ್ಕಿ ಮತ್ತು ಮೊಳಹಳ್ಳಿಗಳಲ್ಲಿ ಒಟ್ಟು 9 ಮಂಗಗಳ ಶವ ಪತ್ತೆಯಾಗಿದೆ. ವಾರದ ಅವಧಿಯಲ್ಲಿ ಅಲೆವೂರಿನಲ್ಲಿ 3 ಹಾಗೂ ಮಣಿಪುರದಲ್ಲಿ 1 ಮಂಗ ಸಾವನ್ನಪ್ಪಿವೆ. ಈ ಪೈಕಿ 2 ಮಂಗಗಳಲ್ಲಿ ನೆಗೆಟಿವ್‌ ಪರೀಕ್ಷಾ ಫ‌ಲಿತಾಂಶ ಬಂದಿದ್ದು ಆತಂಕ ದೂರವಾಗಿದೆ. ಇನ್ನೆರಡು ಮಂಗಗಳ ಶವ ಪರೀಕ್ಷೆ ಫ‌ಲಿತಾಂಶ ಸದ್ಯವೇ ಬರಲಿದೆ ಎನ್ನಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ 159 ಜನರು ಇಲ್ಲಿಯ ವರೆಗೆ ಶಂಕಿತ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯಲು ಮತ್ತು ಜ್ವರ ಮರುಕಳಿಸಿದ್ದರಿಂದ ನಾಲ್ವರು ಮಣಿಪಾಲ ಆಸ್ಪತ್ರೆಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಸುಮಾರು 55 ಜನರಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಮತ್ತು 91 ಜನರಿಗೆ ಮಂಗನ ಕಾಯಿಲೆ ಇರದ ಬಗ್ಗೆ ವರದಿಯಾಗಿದೆ. ಎರಡು ದಿನಗಳ ಹಿಂದೆ ಶಂಕಿತ ಮಂಗನಕಾಯಿಲೆಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ ವಿದೇಶಿ (ಫ್ರಾನ್ಸ್) ಮಹಿಳೆ ಸದ್ಯ ಚೇತರಿಸಿಕೊಂಡಿದ್ದಾರೆ.

Comments are closed.