ಕರಾವಳಿ

ಆರೋಗ್ಯಪೂರ್ಣ ದಿನಚರಿಗೆ ಪ್ರತಿದಿನ ಸೇವಿಸಬಹುದಾದ ಕೆಲವು ಒಣ ಹಣ್ಣುಗಳ ಮಾಹಿತಿ

Pinterest LinkedIn Tumblr

ಪ್ರತಿದಿನ ನಾವು ಹಣ್ಣುಗಳನ್ನ ಸೇವಿಸಬೇಕು ಎಂದು ಡಾಕ್ಟಾರ್ ಹೇಳುತ್ತಾರೆ, ಆದರೆ ಅದನ್ನ ಎಷ್ಟರ ಮಟ್ಟಿಗೆ ಪಾಲಿಸುತ್ತೇವೆ ಎಂಬುದು ಅವರವರಿಗೆ ಬಿಟ್ಟ ವಿಷಯ. ಹಣ್ಣುಗಳನ್ನ ನಾವುಗಳು ಪ್ರತಿದಿನ ಸ್ವಲ್ಪ ಮಟ್ಟಿಗಾದರೂ ಸೆವಿಸ ಬೇಕು, ಇವುಗಳಲ್ಲಿ ನಮ್ಮ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳು ಇವೆ. ಹಣ್ಣುಗಳಲ್ಲಿ ಪ್ರೋಟೀನ್ಸ್, ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್ ಗಳು ಯಥೇಚ್ಛವಾಗಿರುತ್ತದೆ. ಒಣ ಹಣ್ಣುಗಳಲ್ಲಿ ವಿಟಮಿನ್ ಇ, ಬಿ2, ಫೋಲೇಟ್, ಮೆಗ್ನೀಷಿಯಂ, ಪೊಟ್ಯಾಷಿಯಂ, ಫಾಸ್ಫರಸ್ ಹೀಗೆ ಹಲವಾರು ರೀತಿಯ ಖನಿಜಾಂಶವನ್ನು ಕೂಡ ಒಳಗೊಂಡಿರುತ್ತದೆ. ನಿಮ್ಮ ಆರೋಗ್ಯಪೂರ್ಣ ದಿನಚರಿಗೆ ಪ್ರತಿದಿನ ಸೇವಿಸಬಹುದಾದ ಕೆಲವು ಡ್ರೈಫ್ರೂಟ್ಸ್ ಗಳ ಮಾಹಿತಿ ಇಲ್ಲದೆ ನೋಡಿ.

ಬಾದಾಮಿ : ಉತ್ತಮ ಆರೋಗ್ಯಕ್ಕೆ ಬಾದಾಮಿ ಅತ್ಯುತ್ತಮವಾಗಿದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಅಮೈನೋ ಆ್ಯಸಿಡ್ ರಕ್ತನಾಳಗಳ ಹರಿವನ್ನು ಸರಾಗಗೊಳಿಸಿ, ರಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತದೆ.

ಗೋಡಂಬಿ : ಇದರಲ್ಲಿ ವಿಟಮಿನ್ ಇ ಅಂಶ ಸಮೃದ್ಧವಾಗಿದ್ದು, ಇದು ನಮ್ಮ ದೇಹಕ್ಕೆ ಸರಿಯಾದ ರಕ್ತ ಪರಿಚಲನೆ ಮಾಡುವಲ್ಲಿ ಸಹಕರಿಸುತ್ತದೆ.

ವಾಲ್ ನಟ್ : ಸಣ್ಣ ಮಕ್ಕಳಿಗೆ ಪ್ರತಿದಿನ ಇದನ್ನು ಸೇವಿಸಲು ನೀಡುವುದರಿಂದ ಮೆದುಳಿನ ಬೆಳವಣಿಗೆಗೆ ಅನುಕೂಲವಾಗುತ್ತದೆ ಹಾಗೂ ಜ್ಞಾಪಕಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹೃದಯದ ಕಾರ್ಯ ನಿರ್ವಹಣೆಗೆ ಆಗುವ ಅಡೆತಡೆಗಳನ್ನು ಸಹ ತಡೆಗಟ್ಟುತ್ತದೆ.

ಪಿಸ್ತಾ : ಇದರಲ್ಲಿ ಗ್ಲೈಸಮಿಕ್ ಅಂಶ ಕಡಿಮೆಯಿರುವುದರಿಂದ ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ರಹಿತವಾಗಿದೆ. ಹೃದಯಕ್ಕೆ ರಕ್ತ ಪರಿಚಲನೆ ಸರಾಗವಾಗಿಸುತ್ತದೆ.

Comments are closed.